ಶಾಲಾ ಮಕ್ಕಳ ಸುರಕ್ಷತಾ ವರದಿ ನೀಡಲು ಶಿಕ್ಷಣ ಇಲಾಖೆ ಸೂಚನೆ: ಏನೆಲ್ಲ ಸುರಕ್ಷತಾ ಕ್ರಮ ಕೈಗೊಳ್ಳಬೇಕು?

School Fire
Published on

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಲಾಗಿದೆಯೇ ಎಂಬುದನ್ನು ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲಿಸಿ ಮೇಲ್ವಿಚಾರಣೆ ನಡೆಸಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಂದ ಮಾಹಿತಿ ಪಡೆದು ರಾಜ್ಯ ಕಚೇರಿಗೆ ಕಳುಹಿಸಿಕೊಡುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚಿಸಿದೆ.

ಪ್ರತಿ ಶೈಕ್ಷಣಿಕ ವರ್ಷದ ಆಗಸ್ಟ್, ನವೆಂಬರ್ ಮತ್ತು ೆಬ್ರವರಿ ಅಂತ್ಯದಲ್ಲಿ ಶಾಲೆಗಳಿಂದ ಪರಿಶೀಲನಾ ವರದಿಯನ್ನು ಪಡೆಯುವಂತೆ ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರಮುಖವಾಗಿ ಭೌತಿಕ, ಭಾವನಾತ್ಮಕ ಮತ್ತು ವೈಯಕ್ತಿಕ, ಸಾಮಾಜಿಕ, ತುರ್ತು ಸಿದ್ಧತೆಗಳು ಮತ್ತು ಸೈಬರ್ ಭದ್ರತೆಗಳನ್ನು ಒಳಗೊಂಡ ಮಾನದಂಡಗಳನ್ನು ಇಲಾಖೆಯು ನಿಗದಿ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಪೇರೆಂಟ್ ಟೀಚರ್ ಅಸೋಸಿಯಯೇಷನ್ (ಪಿಟಿಎ) ಸಭೆಗಳಲ್ಲಿ ಶಾಲೆ/ಸಂಸ್ಥೆ ತೆಗೆದುಕೊಂಡಿರುವ ಕ್ರಮಗಳ ಕುರಿತ ಜಾಗೃತಿ ಮೂಡಿಸುವುದು.

ಎನ್‌ಸಿಪಿಸಿಆರ್ ಚೆಕ್‌ಲಿಸ್ಟ್‌ನಂತೆ ಶಾಲೆಯ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿ ಅಂಶವಾರು, ಸ್ಥಿತಿ ದಾಖಲಿಸಿ ವರದಿಯನ್ನು ಸಮಿತಿಯು ದೃಢೀಕರಿಸುವುದು.

ವರದಿಯನ್ನಾಧರಿಸಿ ಶಾಲಾ ಮುಖ್ಯಸ್ಥರು ಮಕ್ಕಳ ಸುರಕ್ಷತೆ ನಿಯಮಗಳನ್ನು ಅನುಷ್ಠಾನಗೊಳಿಸಲು ತ್ವರಿತವಾಗಿ ಅನುಷ್ಠಾನಗೊಳಸಬೇಕಾದ ಯೋಜನೆಯನ್ನು ಸಮಿತಿಯ ಸಹಕಾರದೊಂದಿಗೆ ಸಿದ್ಧಪಡಿಸುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net