ಅಕ್ರಮ ಹಣ ವರ್ಗಾವಣೆ; ಹೀರೋ ಮೋಟೋ ಕಾರ್ಪ್​ ಮುಖ್ಯಸ್ಥ ಪವನ್​ ಮುಂಜಾಲ್​ ಮನೆ ಮೇಲೆ ED ದಾಳಿ

Pawan Munjal
Published on

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ(ED) ಅಧಿಕಾರಿಗಳು ಹೀರೋ ಮೋಟೋ ಕಾರ್ಪ್​ ಕಂಪನಿಯ ಮುಖ್ತಸ್ಥ ಪವನ್ ಮುಂಜಾಲ್​ ಅವರ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯ ಅಡಿಯಲ್ಲಿ ಅಧಿಕಾರಿಗಳು ದೆಹಲಿ ಹಾಗೂ ಗುರುಗ್ರಾಮದಲ್ಲಿರುವ ಕಚೇರಿ, ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮುಂಜಾಲ್​ ತಮ್ಮ ಆಪ್ತರೊಬ್ಬರ ಮುಖಾಂತರ ವಿದೇಶಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪದ ಮೇಲೆ ದಾಳಿ ಮಾಡಲಾಗಿದೆ. ED ದಾಳಿಯ ಸುದ್ದಿ ಹೊರಬೀಳುತ್ತಿದ್ದಂತೆ ಹೀರೋ ಮೋಟೋ ಕಾರ್ಪ್​ನ ಷೇರುಗಳಲ್ಲಿ ಶೇ. 04ರಷ್ಟು ಕುಸಿತವಾಗಿದ್ದು, 3,064 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಇನ್​ಕಮ್​ ಟ್ಯಾಕ್ಸ್​ ಅಧಿಕಾರಿಗಳು ಮುಂಜಾಲ್​ ಹಾಗೂ ಅವರ ಒಡೆತನದ ಹೀರೋ ಮೋಟೋಕಾರ್ಪ್​​ ಕಂಪನಿ ಮೇಲೆ ದಾಳಿ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net