ಉಪಚುನಾವಣೆ ಮುಂದೂಡಿದ ಚುನಾವಣಾ ಆಯೋಗ

election
Published on

ನವದೆಹಲಿ : ಕರೊನಾ ನಡುವೆ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಸಿದ್ದಕ್ಕೆ ಟೀಕೆಗಳಿಗೆ ಗುರಿಯಾದ ಬೆನ್ನಲ್ಲೇ, ಚುನಾವಣಾ ಆಯೋಗವು ಮುಂದಿನ ಸುತ್ತಿನ ಚುನಾವಣೆಗಳನ್ನು ಮುಂದೂಡಿದೆ. ದೇಶದ ವಿವಿಧೆಡೆಯ 3 ಲೋಕಸಭಾ ಕ್ಷೇತ್ರಗಳಿಗೆ ಮತ್ತು 8 ವಿಧಾನಸಭಾ ಕ್ಷೇತ್ರಗಳಿಗೆ ನಡೆಸಬೇಕಾದ ಉಪಚುನಾವಣೆಗಳನ್ನು ಕರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ನಡೆಸುವುದಿಲ್ಲ ಎಂದಿದೆ.

ದಾದರ್ ಮತ್ತು ನಗರ್​ ಹವೇಲಿ, ಮಧ್ಯಪ್ರದೇಶದ ಖಾಂಡ್ವ ಮತ್ತು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. "ಸಾಂಕ್ರಾಮಿಕದ ಪರಿಸ್ಥಿತಿಯು ಸುಧಾರಿಸುವವರೆಗೆ ಉಪಚುನಾವಣೆಗಳನ್ನು ನಡೆಸುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿದೆ" ಎಂದು ಆಯೋಗ ಪತ್ರಿಕಾ ಹೇಳಿಕೆ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net