More

    ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ

    ನವದೆಹಲಿ: ಕರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು “ಅನಿವಾರ್ಯ” ಎಂದು ಕೇಂದ್ರ ಸರ್ಕಾರದ ಉನ್ನತ ವೈಜ್ಞಾನಿಕ ಸಲಹೆಗಾರರು ಇಂದು ಹೇಳಿದ್ದಾರೆ, ಭಾರತದಲ್ಲಿ ಸಾಂಕ್ರಾಮಿಕತೆಯನ್ನು ಹೆಚ್ಚಿಸಿ ಸಾವಿರಾರು ಜನರ ಸಾವಿಗೆ ಕಾರಣವಾಗುತ್ತಿರುವ ಹೊಸ ವೈರಸ್​​ ತಳಿಗಳನ್ನು ಎದುರಿಸಲು ಲಸಿಕೆಗಳನ್ನು ‘ಅಪ್​​ಡೇಟ್​’ ಮಾಡುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.

    “ವೈರಸ್​ ಪ್ರಸಾರವಾಗುತ್ತಿರುವ ಅಧಿಕ ಮಟ್ಟವನ್ನು ನೋಡಿದರೆ 3ನೇ ಹಂತ ಅನಿವಾರ್ಯ ಎನಿಸುತ್ತದೆ. ಆದರೆ ಯಾವ ಕಾಲಾವಧಿಯಲ್ಲಿ ಈ ಮೂರನೇ ಹಂತ ಸಂಭವಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ಕಂತುಕಂತಿನಲ್ಲಿ ಸೋಂಕಿನ ದರ ಏರುತ್ತದೆಂದು ಭಾವಿಸೋಣ, ಆದರೆ ನಾವು ಹೊಸ ಅಲೆಗಳಿಗೆ ತಯಾರಾಗಬೇಕು. ಪರಿಸ್ಥಿತಿಯ ಮೇಲೆ ನಿರಂತರ ಕಣ್ಗಾವಲು ಇಡುವುದರೊಂದಿಗೆ ಲಸಿಕೆಯ ನವೀಕರಣ ಕೂಡ ಅಗತ್ಯವಾಗಿದೆ” ಎಂದು ಡಾ. ಕೆ.ವಿಜಯರಾಘವನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ವಿಜಯರಾಘವನ್ ಅವರು ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್​​ನ ನಿರ್ದೇಶಕರಾಗಿದ್ದವರು.

    ಇದನ್ನೂ ಓದಿ: ಕರೊನಾಗೆ ಬಲಿಯಾದರು ‘ಶೂಟರ್ ದಾದಿ’

    ಹಾಲಿ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸುತ್ತಿರುವ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,780 ಕರೊನಾ ಸಾವು ಸಂಭವಿಸಿವೆ. ಕಳೆದ ವಾರ ಜಾಗತಿಕವಾಗಿ ವರದಿಯಾಗಿರುವ ಕರೊನಾ ಪ್ರಕರಣಗಳಲ್ಲಿ ಶೇ. 46 ರಷ್ಟು ಪ್ರಕರಣಗಳು ಭಾರತದಲ್ಲಿವೆ ಮತ್ತು ಕಾಲು ಭಾಗದಷ್ಟು ಸಾವುಗಳು ಭಾರತದಲ್ಲಿ ಸಂಭವಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇಂದು ತಿಳಿಸಿದೆ.

    ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 3.82 ಲಕ್ಷ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಆಸ್ಪತ್ರೆಗಳು ಕರೊನಾ ರೋಗಿಗಳಿಗೆ ಬೆಡ್​ ಮತ್ತು ಆಕ್ಸಿಜನ್ ಒದಗಿಸಲು ಕಷ್ಟಪಡುತ್ತಿದ್ದರೆ, ಮೃತದೇಹಗಳ ಅಂತ್ಯಕ್ರಿಯೆಗೆ ಚಿತಾಗಾರಗಳಲ್ಲಿ ಸಾಲುಗಟ್ಟಿದೆ. ದೇಶದಲ್ಲಿ ಲಾಕ್​ಡೌನ್​ ಮಾಡಬೇಕೆಂದು ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ. ಆರ್ಥಿಕ ಮತ್ತು ಸಾಮಾಜಿಕ ಅಡ್ಡ ಪರಿಣಾಮಗಳ ಚಿಂತೆಯಲ್ಲಿ ಸರ್ಕಾರ ಇನ್ನೂ ಲಾಕ್​ಡೌನ್ ವಿಧಿಸಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

    ಶೇ.78 ರಷ್ಟು ನಗರ ಪೊಲೀಸರಿಗೆ ಲಸಿಕೆ ಪೂರ್ಣ ; 754 ಕರೊನಾ ಪ್ರಕರಣಗಳು

    ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts