More

    ಶೇ.78 ರಷ್ಟು ನಗರ ಪೊಲೀಸರಿಗೆ ಲಸಿಕೆ ಪೂರ್ಣ ; 754 ಕರೊನಾ ಪ್ರಕರಣಗಳು

    ಬೆಂಗಳೂರು : ಬೆಂಗಳೂರು ನಗರ ಪೊಲೀಸ್​ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇ.77.90 ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ನೀಡಲಾಗಿದೆ. ನಗರದಲ್ಲಿ ಸಿವಿಲ್​, ಸಂಚಾರ, ಮೀಸಲು ಪಡೆ, ತಾಂತ್ರಿಕ ವಿಭಾಗ ಸೇರಿದಂತೆ 26 ಘಟಕಗಳಲ್ಲಿ 18,821 ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 17,892 ಮಂದಿ ಮೊದಲ ಡೋಸ್​ ಲಸಿಕೆ ಪಡೆದಿದ್ದು, 14,664 ಮಂದಿ (ಶೇ.77.90) ಲಸಿಕೆಯ 2ನೇ ಡೋಸ್​ ಕೂಡ ಪಡೆದಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಇದಲ್ಲದೆ, ನಗರದ ಪೊಲೀಸರಲ್ಲಿ ಈವರೆಗೆ 946 ಮಂದಿಗೆ ಕರೊನಾ ಸೋಂಕು ದೃಢವಾಗಿದೆ. ಇದರಲ್ಲಿ 754 ಆ್ಯಕ್ಟೀವ್​ ಪ್ರಕರಣಗಳಾಗಿವೆ. ಈ ಪೈಕಿ ಒಬ್ಬರು ಐಸಿಯುನಲ್ಲಿದ್ದರೆ, ಮತ್ತೊಬ್ಬರು ಆಮ್ಲಜನಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 29 ಮಂದಿ ಆಸ್ಪತ್ರೆಯಲ್ಲಿ ಇದ್ದರೆ, 723 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಲ್ಲಿ 14 ಮಂದಿ ಮೊದಲ ಡೋಸ್​ ಲಸಿಕೆ ಪಡೆದವರಿದ್ದಾರೆ, 15 ಮಂದಿ 2ನೇ ಡೋಸ್​​ ಲಸಿಕೆ ಸಹ ಪಡೆದಿದ್ದಾರೆ.

    ಇದನ್ನೂ ಓದಿ: ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ಸಿವಿಲ್​, ಸಂಚಾರ ವಿಭಾಗದ ಪೊಲೀಸರು ಶೇ.90 ಮಂದಿ ಎರಡೂ ಡೋಸ್​ ಪಡೆದಿದ್ದಾರೆ. ಸಿಸಿಬಿ ವಿಭಾಗದ 60 ಮಂದಿಯಲ್ಲಿ 59 ಮಂದಿ ಎರಡು ಹಂತದ ಲಸಿಕೆ ಪಡೆದಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಭದ್ರತೆಗೆ ನಿಯೋಜನೆಗೊಂಡಿರುವ 107 ಮಂದಿ ಪೊಲೀಸರಲ್ಲಿ ಕೇವಲ 59 ಮಂದಿ ಮಾತ್ರ ಕೋವ್ಯಾಕ್ಸಿನ್​ ಪಡೆದಿದ್ದಾರೆ. ಇನ್ನೂ ಅರ್ಧದಷ್ಟು ಮಂದಿ ಲಸಿಕೆ ಕಡೆ ಮುಖಾನೇ ಮಾಡಿಲ್ಲ ಎಂದು ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.

    ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

    ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts