More

    ಕ್ಯಾನ್ಸರ್​ ತಡೆಗೆ ಶೀಘ್ರ ಲಸಿಕೆ.​..ರಷ್ಯಾ ಅಧ್ಯಕ್ಷ ಪುತಿನ್​ ಮಾಹಿತಿ

    ಮಾಸ್ಕೋ: ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್ ಲಸಿಕೆ ತಯಾರಿಸುತ್ತಿದ್ದಾರೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

    ಇದನ್ನೂ ಓದಿ: 60ರ ಹರೆಯದಲ್ಲಿ ಪ್ರಧಾನಿ​ಗೆ 2ನೇ ಮದುವೆ! ವಿವರ ಇಲ್ಲಿದೆ ನೋಡಿ..

    ಲಸಿಕೆ ತಯಾರಿಕೆಯು ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಮಾಸ್ಕೋದಲ್ಲಿ ಭವಿಷ್ಯದ ತಂತ್ರಜ್ಞಾನಗಳ ಕುರಿತಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

    ಕ್ಯಾನ್ಸರ್ ಲಸಿಕೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹೊಸ ಔಷಧ ತಯಾರಿಕೆಗೆ ನಾವು ಬಹಳ ಹತ್ತಿರವಾಗಿದ್ದೇವೆ, ಮುಂದಿನ ದಿನಗಳಲ್ಲಿ ಇವುಗಳನ್ನು ಚಿಕಿತ್ಸೆಗಳಲ್ಲಿ ಬಳಸಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

    ಈ ಲಸಿಕೆ ಯಾವ ರೀತಿಯ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. ಅನೇಕ ದೇಶಗಳು ಈಗಾಗಲೇ ವಿವಿಧ ರೀತಿಯ ಕ್ಯಾನ್ಸರ್ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಕ್ಯಾನ್ಸರ್ ಲಸಿಕೆಗಾಗಿ ಬ್ರಿಟನ್ ಸರ್ಕಾರ ಬಯೋ ಎಸ್ಟಿಕ್​ ಎಂಬ ಜರ್ಮನ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 2030ರ ವೇಳೆಗೆ ಹತ್ತು ಸಾವಿರ ರೋಗಿಗಳಿಗೆ ನೀಡುವ ಗುರಿ ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್​ಒ) ವರದಿಯ ಪ್ರಕಾರ, ವಿವಿಧ ರೀತಿಯ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್​ಪಿವಿ) ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗುವ ಹೆಪಟೈಟಿಸ್-ಬಿ ತಡೆಗಟ್ಟಲು ಅಗತ್ಯವಿರುವ ಆರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಂಕಿಅಂಶಗಳ ಪ್ರಕಾರ, 2026 ರ ವೇಳೆಗೆ ಭಾರತದಲ್ಲಿ 20 ಲಕ್ಷ ಜನರು ಕ್ಯಾನ್ಸರ್​ ಪೀಡಿತರಾಗಬಹುದು ಎಂದು ಅಂದಾಜಿಸಲಾಗಿದೆ. 2019 ರಲ್ಲಿ ಭಾರತದಲ್ಲಿ 12 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. 9.3 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಲ್ಯಾನ್ಸೆಟ್ ಜರ್ನಲ್ ಹೇಳಿದೆ. ರಷ್ಯಾದ ಲಸಿಕೆ ಲಭ್ಯವಾದರೆ, ಅದು ಭಾರತದ ಅನೇಕ ಜನರಿಗೆ ಉಪಯುಕ್ತವಾಗಲಿದೆ.

    ಐದು ವರ್ಷದಿಂದ ಡೇಟಿಂಗ್​..ಸೀಕ್ರೆಟ್​ ಎಂಗೇಜ್​ಮೆಂಟ್..​ ಮದುವೆ ಹಿಂಟ್​ ಕೊಟ್ಟ ಹೀರೋಯಿನ್​​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts