More

    ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

    ಶ್ರೀಕಕುಲಂ : ಕರೊನಾ ಪೀಡಿತನಾಗಿ ಸಾಯುವ ಹಂತದಲ್ಲಿದ್ದ ಪುರುಷನಿಗೆ ನೀರು ಕುಡಿಸಲು ಹತ್ತಿರ ಹೋಗದಂತೆ ಮಗಳನ್ನು ತಡೆಯುತ್ತಿರುವ ತಾಯಿ, ತಾಯಿಯ ಮಾತನ್ನು ಮೀರಿ ಸಮೀಪಿಸಿದ ಮಗಳು, ನೀರು ಕುಡಿಸುತ್ತಲೇ ಪ್ರಾಣ ಬಿಟ್ಟ ತಂದೆ, ಗಗನ ಮುಟ್ಟಿದ ಕುಟುಂಬದ ರೋಧನ – ಈ ಹೃದಯವಿದ್ರಾವಕ ದೃಶ್ಯ ಜಾಲತಾಣದಲ್ಲಿ ಪ್ರಕಟವಾಗಿದೆ.

    ಕರೊನಾದಿಂದ ಕಳೆದುಹೋಗುತ್ತಿರುವ ಅಸಂಖ್ಯಾತ ಪ್ರಾಣಗಳು ಹೀಗೇ ದುಃಖಿಸುವ ಕುಟುಂಬಗಳನ್ನು ಅಗಲಿ ಹೋಗುತ್ತಿರುವ ಶೋಚನೀಯ ಪರಿಸ್ಥಿತಿಗೆ ಇದು ಕನ್ನಡಿ ಹಿಡಿದಿದೆ. ಹಲವರು ಚಿಕಿತ್ಸೆ ಫಲಿಸದೆ ಸಾವಪ್ಪುತ್ತಿದ್ದರೆ, ಇನ್ನೂ ಹಲವರು ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಸಾವಪ್ಪುತ್ತಿದ್ದಾರೆ.

    ಇತ್ತೀಚೆಗೆ ವಿಜಯವಾಡದಲ್ಲಿ ಕಾರ್ಮಿಕರಾಗಿದ್ದ ಅಸಿರಾ ನಾಯ್ಡು (50) ಮತ್ತು ಅವರ ಕುಟುಂಬಕ್ಕೆ ಕರೊನಾ ಪಾಸಿಟೀವ್ ಬಂತು. ಲಾಕ್​ಡೌನ್ ಆಗುವ ಭಯದಿಂದ ಅವರು ತಮ್ಮ ಸ್ವಂತ ಊರಾದ ಶ್ರೀಕಕುಲಂ ಜಿಲ್ಲೆಯ ಜಿ ಸಿಗದಂ ಮಂಡಲದ ವ್ಯಾಪ್ತಿಯಲ್ಲಿ ಬರುವ ಕೊಯ್ಯನಪೇಟ ಗ್ರಾಮಕ್ಕೆ ಹಿಂತಿರುಗುವ ನಿರ್ಧಾರ ಮಾಡಿದರು. ಅವರು ಗ್ರಾಮ ತಲುಪಿದಾಗ, ಅವರಿಗೆ ಸೋಂಕು ತಗುಲಿದ್ದರಿಂದ, ಗ್ರಾಮಸ್ಥರು ಹಳ್ಳಿಗೆ ದೂರದಲ್ಲಿರುವ ಜಮೀನಿನಲ್ಲಿನ ಗುಡಿಸಲಿನಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಹೇಳಿದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

    ಒಂದೆರಡು ದಿನಗಳಲ್ಲೇ ನಾಯ್ಡು ಅವರ ಆರೋಗ್ಯ ಹದಗೆಟ್ಟಿದ್ದು, ಉಸಿರಾಟದಲ್ಲಿ ತೀವ್ರ ಸಮಸ್ಯೆ ಕಂಡುಬಂದಿತು. ನೆಲದ ಮೇಲೆ ಬಿದ್ದು ಒದ್ದಾಡಿದ ಅವರ ಸ್ಥಿತಿ ನೋಡಲಾಗದೇ, ಮಗಳು ನೀರು ಒಯ್ಯಲು ಪ್ರಯತ್ನಿಸಿದಾಗ ತಾಯಿ ತಡೆದಿದ್ದಾಳೆ. ಆದರೆ ಅಳುತ್ತಾ ಅಮ್ಮನ ಮಾತನ್ನು ಕೇಳದೆ ಅವರ ಸಮೀಪ ಹೋಗಿ ಆಕೆ ನೀರು ಕುಡಿಸಿದ್ದಾಳೆ. ನೀರು ಕುಡಿಯುತ್ತಲೇ ನಾಯ್ಡು, ಅವರ ಪತ್ನಿ ಮತ್ತು ಪುತ್ರಿಯ ಎದುರಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಅಸಹಾಯಕವಾಗಿ ನೋಡಬೇಕಾದ ಪರಿಸ್ಥಿತಿಯಲ್ಲಿ ಇಡೀ ಕುಟುಂಬ ಸಂಕಟ ಪಟ್ಟಿದೆ.

    ಶ್ರೀಕಕುಲಂ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2398 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದರೆ, ಆಂದ್ರ ಪ್ರದೇಶದಲ್ಲಿ ಒಟ್ಟು 20,034 ಪ್ರಕರಣಗಳು ಮತ್ತು 82 ಕರೊನಾ ಸಾವುಗಳು ಸಂಭವಿಸಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಹೋಟೆಲ್ ಮ್ಯಾನೇಜ್​​ಮೆಂಟ್​ ಪ್ರವೇಶ ಪರೀಕ್ಷೆ ಮುಂದಕ್ಕೆ; ಮೇ 31 ರವರೆಗೆ ಎನ್​ಸಿಹೆಚ್​ಎಂ ಜೆಇಇ ನೋಂದಣಿಗೆ ಅವಕಾಶ

    ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts