ಅಮೇಥಿ(ಉತ್ತರ ಪ್ರದೇಶ): ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮಾತಿನ ಸಮರ ಜೋರಾಗಿಯೇ ನಡೆಯುತ್ತಿದೆ.
‘ನಿಮ್ಮ ಆರೋಪಗಳಿಗೆ ಉತ್ತರ ನೀಡಲು ಬಿಜೆಪಿ ಸಿದ್ಧವಿದೆ. ಯಾವುದೇ ವಿಷಯದ ಬಗ್ಗೆ, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಯಾವುದೇ ದೂರದರ್ಶನ ಚಾನೆಲ್‌ನಲ್ಲಿ, ಯಾವುದೇ ಆ್ಯಂಕರ್ ಸಮ್ಮುಖದಲ್ಲಿ ಚರ್ಚೆಗೆ ಸಿದ್ಧರಿದ್ದೇವೆ’ ಎಂದು ಕೇಂದ್ರ ಸಚಿವೆ ಮತ್ತು ಅಮೇಥಿ ಬಿಜೆಪಿ ಸಂಸದೀಯ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದರು.
ಇದನ್ನೂ ಓದಿ: ‘ನಮಗೆ 15ನಿಮಿಷವಲ್ಲ, 15 ಸೆಕೆಂಡ್ ಸಾಕು’: ಓವೈಸಿ ಸಹೋದರರಿಗೆ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ವಾರ್ನಿಂಗ್?
ಈ ಚರ್ಚೆಯಲ್ಲಿ ನಾನು ಒಂದೆಡೆ ಕೂರುತ್ತೇನೆ. ಇನ್ನೊಂದೆಡೆ ಇವರಿಬ್ಬರು ಕುಳಿತುಕೊಳ್ಳಲಿ, ಅಲ್ಲೇ ಅವರ ಆರೋಪಗಳಿಗೆ ಉತ್ತರ ಕೊಡುತ್ತೇನೆ ಎಂದರು. ಆದರೆ ಅವರ ಆರೋಪ ಮತ್ತು ಅನುಮಾನಗಳಿಗೆ ಉತ್ತರಿಸಲು ತಮ್ಮ ಪಕ್ಷದ ವಕ್ತಾರ ಸುದಾಂಶು ತ್ರಿವೇದಿ ಸಾಕು ಎಂದು ಸ್ಮೃತಿ ಇರಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರಧಾನಿ ಮೋದಿಯವರನ್ನು ಪ್ರಿಯಾಂಕಾ ಗಾಂಧಿ ಟೀಕಿಸಿರುವ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸ್ಮೃತಿ ಇರಾನಿ ಮತ್ತೊಮ್ಮೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅಂದರೆ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ ಅಮೇಥಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ.
ಗಾಂಧಿ ಕುಟುಂಬಕ್ಕೆ ಅತ್ಯಂತ ನಿಕಟವಾಗಿರುವ ಕೆ.ಎಲ್. ಶರ್ಮಾ ಅವರನ್ನು ಅಮೇಥಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ನಾಯಕತ್ವ ಕಣಕ್ಕಿಳಿಸಿದೆ. ಅಮೇಠಿ ಗಾಂಧಿ ಕುಟುಂಬದ ಭದ್ರಕೋಟೆ ಎಂಬುದು ಎಲ್ಲರಿಗೂ ಗೊತ್ತು. ಆ ಸ್ಥಾನದಿಂದ ಗಾಂಧಿ ಕುಟುಂಬದವರ ಹೊರತಾಗಿ ಹೊರಗಿನವರು ಕಣಕ್ಕೆ ಇಳಿದಿದ್ದು, ಈ ವಿಚಾರವಾಗಿ ಬಿಜೆಪಿ ಆರೋಪ ಮಾಡಿದೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.
ಮತ್ತೊಂದೆಡೆ, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಪ್ರಚಾರದ ಜವಾಬ್ದಾರಿಯನ್ನು ಪ್ರಿಯಾಂಕಾ ಗಾಂಧಿ ಹೊತ್ತಿದ್ದು, ತಮ್ಮದೇ ಶೈಲಿಯಲ್ಲಿ ಪ್ರಿಯಾಂಕಾ ಮುನ್ನಡೆಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಗೆದ್ದಿದ್ದರು.
ಆದರೆ ಸೋನಿಯಾ ಗಾಂಧಿ ಇತ್ತೀಚೆಗೆ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ರಾಯ್ ಬರೇಲಿಯಿಂದ ಬಿಜೆಪಿ ಮತ್ತೆ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ತನ್ನ ಕಣಕ್ಕಿಳಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಸೋನಿಯಾ ವಿರುದ್ಧ ದಿನೇಶ್ ಸ್ಪರ್ಧಿಸಿ ಸೋತಿದ್ದರು.
‘ನಾನು ಆ ಬಾಲಿವುಡ್ ಸ್ಟಾರ್‌ನ ಅಭಿಮಾನಿ’: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನದಾಳದ ಮಾತು!