More

    ‘ನಮಗೆ 15ನಿಮಿಷವಲ್ಲ, 15 ಸೆಕೆಂಡ್ ಸಾಕು’: ಓವೈಸಿ ಸಹೋದರರಿಗೆ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ವಾರ್ನಿಂಗ್​?

    ಹೈದರಾಬಾದ್: ‘ನೀವು ಅಂದುಕೊಂಡಿದ್ದನ್ನು ಸಾಧಿಸಲು 15 ನಿಮಿಷ ಬೇಕೆಂದು ಹೇಳಿದ್ದೀರಿ. ಆದರೆ ಅಷ್ಟು ಕಾಲಾವಕಾಶ ಬೇಡ, 15 ಸೆಕೆಂಡ್ ಸಾಕು. ನೀವು ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋದಿರಿ ಎಂಬುದೂ ಗೊತ್ತಾಗರಬಾರದು. ಹಾಗೆ ಮಾಡುತ್ತೇವೆ..’

    ಇದು ಈ ಹಿಂದೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ, ಅಮರಾವತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ನೀಡಿದ ತಿರುಗೇಟು.

    ಇದನ್ನೂ ಓದಿ: ‘ನಾನು ಆ ಬಾಲಿವುಡ್‌ ಸ್ಟಾರ್‌ನ ಅಭಿಮಾನಿ’: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನದಾಳದ ಮಾತು!

    ಹೈದರಾಬಾದ್ ಕ್ಷೇತ್ರದಲ್ಲಿ ಎಐಎಂಐಎಂ ಪಕ್ಷ ಸಂಸದ ಓಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರ ಭಾಷಣ ಮಾಡುವ ವೇಳೆ ಈ ಎಚ್ಚರಿಕೆ ನೀಡಿದರು.

    ಅಸಾದುದ್ದೀನ್ ಓವೈಸಿ ಸಹೋದರ ಅಕ್ಬರುದ್ದೀನ್ ಓವೈಸಿ ಈ ಹಿಂದೆ ಮಾತನಾಡುವಾಗ 15 ನಿಮಿಷ ಪೊಲೀಸರನ್ನು ತೆರವುಗೊಳಿಸಿದರೆ, ನಾವೇನೆಂದು ತೋರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ನವನೀತ್ ರಾಣಾ 15 ಸೆಕೆಂಡ್​ ಪೊಲೀಸರನ್ನು ತೆರವುಗೊಳಿಸಿದರೂ ಸಾಕು, ಅಣ್ಣ ತಮ್ಮಂದಿರಿಬ್ಬರು ಎಲ್ಲಿಂದ ಬಂದಿದ್ದಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದೂ ತಿಳಿಯಬಾರದು. ಹಾಗೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    2013ರಲ್ಲಿ ಅಕ್ಬರುದ್ದೀನ್ ಓವೈಸಿ ಬಹಿರಂಗ ಸಭೆಯಲ್ಲಿ ಮಾತನಾಡುವಾಗ 15 ನಿಮಿಷ ಪೊಲೀಸರನ್ನು ತೆರವುಗೊಳಿಸಿ ನೋಡಿ, 100 ಕೋಟಿ ಹಿಂದೂಗಳಿಗೆ ನಾವು ಏನೆಂದು ತೋರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ. ಇದಕ್ಕೆ ರಾಷ್ಟ್ರಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದನ್ನು ಖಂಡಿಸಿ ನವನೀತ್ ರಾಣಾ 15 ಸೆಕೆಂಡಿನ ಹೇಳಿಕೆ ನೀಡಿದ್ದಾರೆ.

    ಎಐಎಂಐಎಂ ಆಕ್ಷೇಪ: ನವನೀತ್ ರಾಣಾ ಹೇಳಿಕೆಗೆ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ವಿರೋಧ ವ್ಯಕ್ತಪಡಿಸಿದ್ದು, ನವನಿತ್ ರಾಣಾ ಈ ಬಾರಿ ಅಮರಾವತಿಯಲ್ಲಿ ಸೋಲುತ್ತಾರೆ ಹೀಗಾಗಿಯೇ ಅವರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. 15 ಸೆಕೆಂಡ್ ಪೋಲೀಸರನ್ನು ತೆಗೆದು ಹಾಕಿದರೆ ಏನು ಮಾಡುತ್ತೀರಿ? ಈ ರೀತಿಯ ಮಾತುಗಳಿಗೆ ಚುನಾವಣಾ ಆಯೋಗ ಯಾಕೆ ಕ್ರಮ ಕೈಗೊಂಡಿಲ್ಲ? ಈ ಬಾರಿ ಬಿಜೆಪಿ 200-250 ಸೀಟು ದಾಟುವುದು ಕಷ್ಟ. ಇದರ ಅರಿವಾಗಿರುವುದರಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ಬಿಜೆಪಿ ಫೈರ್​ಬ್ರಾಂಡ್​ ಎಲ್ಲಿನವರು?: ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್​ಸಿಪಿ) ಯಿಂದ ಸ್ಪರ್ಧಿಸಿದ್ದ ನವನೀತ್ ರಾಣಾ ಸೋಲುಂಡಿದ್ದರು. 2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈ ಬಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪ್ರಸ್ತುತ ಬಿಜೆಪಿ ಫೈರ್​ಬ್ರಾಂಡ್​ ಎಂದೇ ಅವರು ಪ್ರಸಿದ್ಧಿಪಡೆದಿದ್ದಾರೆ.

    ಭಾರತದಲ್ಲಿ ಹಿಂದೂ ಧರ್ಮಿಯರ ಜನಸಂಖ್ಯೆ 7.8% ಕುಸಿತ; ಮುಸ್ಲಿಮರು 43.15%; ಕ್ರಿಶ್ಚಿಯನ್ನರು 5.38% ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts