More

    ಕರೊನಾಗೆ ಬಲಿಯಾದರು ‘ಶೂಟರ್ ದಾದಿ’

    ಮೀರತ್​ : ‘ಶೂಟರ್ ದಾದಿ’ ಎಂದೇ ಪ್ರಖ್ಯಾತರಾಗಿದ್ದ ಹಿರಿಯ ಶೂಟಿಂಗ್ ಕ್ರೀಡಾಪಟು ಚಂದ್ರೋ ತೋಮರ್​ ಅವರು ಕರೊನಾದಿಂದಾಗಿ ಇಂದು ಸಾವಪ್ಪಿದ್ದಾರೆ. 89 ವರ್ಷ ವಯಸ್ಸಿನ ತೋಮರ್​ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ನಂತರ ಮೀರತ್​​ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಉತ್ತರ ಪ್ರದೇಶದ ಬಘ್​ಪತ್​ ಗ್ರಾಮದ ನಿವಾಸಿಯಾಗಿದ್ದ ತೋಮರ್​ ಅವರು, ಮೊದಲ ಬಾರಿ ಬಂದೂಕು ಹಿಡಿದಾಗ 60 ರ ಹರೆಯ ದಾಟಿತ್ತು. ಆದರೆ ಹಿರಿಯರಿಗೆ ನಡೆಯುವ ಹಲವಾರು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅವರ ಸಾಧನೆಗಳು ಜನರನ್ನು ಬಹಳವಾಗಿ ಪ್ರಭಾವಿತಗೊಳಿಸಿದ್ದು, ಅವರ ಮೇಲೆ ‘ಸಾಂಡ್​ ಕಿ ಆಂಖ್’ ಎಂಬ ಪ್ರೇರಣಾದಾಯಕ ಬಾಲಿವುಡ್ ಚಿತ್ರ ತೆಗೆಯಲಾಗಿದೆ.

    ಇದನ್ನೂ ಓದಿ: ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ : ಸಿಎಂ

    “ಚಂದ್ರೋ ನನ್ನನ್ನು ಬಿಟ್ಟು ಎಲ್ಲಿಗೆ ಹೊರಟುಹೋದೆ ?” ಎಂದು ಅತ್ಯಂತ ಹಿರಿಯ ಮಹಿಳಾ ಶಾರ್ಪ್​ ಶೂಟರ್​​ಗಳಲ್ಲಿ ಒಬ್ಬರಾದ​ ಅವರ ಸೋದರಿ ಪ್ರಕಾಶಿ ತೋಮರ್ ತಮ್ಮ ಟ್ವಿಟರ್ ಪೇಜ್​ನಲ್ಲಿ ಬರೆದಿದ್ದಾರೆ. ರಾಜಕೀಯ, ಕ್ರೀಡೆ ಮತ್ತು ಸಿನಿಮಾ ಕ್ಷೇತ್ರಗಳ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

    “ಲೈಂಗಿಕ ಸಮಾನತೆಯ ಪ್ರತೀಕ ಮತ್ತು ಮಹಿಳಾ ಹಕ್ಕುಗಳ ಚಾಂಪಿಯನ್​ ಆಗಿದ್ದ ಚಂದ್ರೋ ತೋಮರ್ ಅವರು ಇನ್ನಿಲ್ಲ. ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೊಡ್ಡಿ ಶೂಟಿಂಗ್​ಅನ್ನು ಕ್ರೀಡೆಯಾಗಿ ಆಯ್ಕೆ ಮಾಡಿದ್ದ ಅವರ ಸಾಹಸವು ಬರುವ ಎಷ್ಟೋ ಪೀಳಿಗೆಗಳಿಗೆ ಪ್ರೇರಣೆಯಾಗಿದೆ” ಎಂದು ಕೇಂದ್ರ ಸಚಿವ ಹರ್​ದೀಪ್​ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    “ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ, ಇಲ್ಲದಿದ್ದರೆ ರಸ್ತೆಯಲ್ಲಿ ಹೆಣಗಳು ಬೀಳುತ್ತವೆ”

    ಜಿಲ್ಲಾಸ್ಪತ್ರೆಯಲ್ಲಿ ರೋಗಿ ಕುಳಿತುಕೊಳ್ಳಲೂ ಅವಕಾಶವಿಲ್ಲ ! ಫುಟ್‌ಪಾತ್ ಮೇಲೆ ಮಲಗಿದ ಮಹಿಳೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts