More

    ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ : ಸಿಎಂ

    ನವದೆಹಲಿ : 18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ನೀಡಲು ಅವಕಾಶ ಒದಗಿಸಿರುವ ಲಸಿಕಾ ಅಭಿಯಾನದ ನಾಲ್ಕನೇ ಹಂತ ನಾಳೆಯಿಂದ(ಮೇ 1) ದೇಶಾದ್ಯಂತ ಆರಂಭ ಎನ್ನಲಾಗಿದೆ. ಆದರೆ, ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರಾಜಧಾನಿಯ ಜನರನ್ನು ಕೇಳಿಕೊಂಡಿದ್ದಾರೆ.

    “ಲಸಿಕೆಗಳು ನಮಗಿನ್ನೂ ಡೆಲಿವರ್ ಆಗಿಲ್ಲ. ನಾವು ಲಸಿಕೆ ಕಂಪೆನಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಾಳೆ ಅಥವಾ ನಾಡಿದ್ದು ಲಸಿಕೆ ತಲುಪಬಹುದು ಎಂದು ಆಶಿಸುತ್ತೇವೆ. ಮೊದಲು ಕೋವಿಶೀಲ್ಡ್​​ನ 3 ಲಕ್ಷ ಡೋಸ್​ಗಳನ್ನು ನೀಡುತ್ತಾರೆ” ಎಂದಿರುವ ಸಿಎಂ, ಲಸಿಕೆ ಲಭ್ಯವಾದ ಕೂಡಲೇ ಜನರಿಗೆ ತಿಳಿಸಲಾಗುವುದು ಎಂದಿದ್ದಾರೆ.

    ಇದನ್ನೂ ಓದಿ: ಹುಷಾರ್! ಔಷಧ ಕೊಳ್ಳುವ ಮುಂಚೆ ಅಸಲಿಯೋ ನಕಲಿಯೋ ಗುರುತು ಹಚ್ಚಿ !

    “ದಯವಿಟ್ಟು ನಾಳೆ ಲಸಿಕಾ ಕೇಂದ್ರಗಳ ಹೊರಗೆ ಸಾಲುಗಟ್ಟಿ ನಿಲ್ಲಬೇಡಿ. ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು. ಸಾಮಾಜಿಕ ಅಂತರ ಇಲ್ಲದಂಥ ಸನ್ನಿವೇಶವೂ ಬರಬಹುದು” ಎಂದು ಸಿಎಂ ಹೇಳಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆಲ್ಲಾ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದಿದ್ದಾರೆ.

    45 ವರ್ಷ ತುಂಬಿರುವ ಜನರಿಗೆ ಮಾತ್ರ ಕರೊನಾ ಲಸಿಕೆ ನೀಡುವ ಅವಕಾಶವಿದ್ದಾಗ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಒದಗಿಸಿ ಎಂದು ಮನವಿ ಮಾಡಿದವರಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಮೊದಲಿಗರು. ದೆಹಲಿಯಲ್ಲಿ ಸುಮಾರು 2 ಕೋಟಿ ಜನರು ವಾಸವಾಗಿದ್ದು, ಈವರೆಗೆ 31 ಲಕ್ಷ ಜನರಿಗೆ ಲಸಿಕೆಯ ಮೊದಲನೇ ಡೋಸ್​​ ನೀಡಲಾಗಿದೆ. ಕೇವಲ ಸುಮಾರು 6 ಲಕ್ಷ ಜನರಿಗೆ ಎರಡೂ ಡೋಸ್​ಗಳನ್ನು ನೀಡಲಾಗಿದೆ. ಮೇ 1 ರ ಲಸಿಕಾ ಕಾರ್ಯಕ್ರಮಕ್ಕೆ ಕೋವಿನ್​ ಆ್ಯಪ್​ನಲ್ಲಿ ನೋಂದಣಿಯನ್ನು ಮೇ 28 ರಿಂದಲೇ ಆರಂಭಿಸಿದ್ದರೂ, ನಿರ್ದಿಷ್ಟ ಟೈಮ್​ ಸ್ಲಾಟ್​ಗಳನ್ನು ಈವರೆಗೂ ನೀಡಲಾಗಿಲ್ಲ.

    ಇದನ್ನೂ ಓದಿ: ಕರೊನಾ ರೋಗಿಗಳಿಗೆ ‘ಅಶ್ವತ್ಥ ಮರದ ಕೆಳಗೆ ಕುಳಿತುಕೊಳ್ಳಿ’ ಎಂದ ಪೊಲೀಸ್ !

    “ಲಸಿಕೆಗಳು ಬಂದ ಕೂಡಲೇ ನಾವು ಸರಿಯಾಗಿ ಘೋಷಣೆ ನೀಡುತ್ತೇವೆ. ನಂತರ ನೋಂದಣಿ ಮಾಡಿಕೊಂಡಿರುವ ಪ್ರತಿಯೊಬ್ಬರೂ ಅಪಾಯಿಂಟ್​ಮೆಂಟ್​ಗಳು ಸಿಕ್ಕ ಹಾಗೆ ಲಸಿಕೆ ಪಡೆಯಬಹುದು. ಇದರಲ್ಲಿ ನಿಮ್ಮ ಸಹಾಯ ಬೇಕು. ಮುಂದಿನ 3 ತಿಂಗಳಲ್ಲಿ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್ ಎರಡೂ ಲಸಿಕೆಗಳ ತಲಾ 67 ಲಕ್ಷ ಡೋಸ್​ಗಳನ್ನು ಒದಗಿಸುವಂತೆ ಆರ್ಡರ್ ನೀಡಲಾಗಿದೆ. ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಉದ್ದೇಶವಾಗಿದೆ. ಕಂಪೆನಿಗಳು ಲಸಿಕೆಯನ್ನು ಸಕಾಲಕ್ಕೆ ಒದಗಿಸಿದರೆ ಇದಕ್ಕೆ ನಾವು ಸಿದ್ಧರಾಗಿದ್ದೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ. (ಏಜೆನ್ಸೀಸ್)

    VIDEO | ‘ನೀವು ಒಬ್ಬಂಟಿ ಅಲ್ಲ’ ಎಂದು ಹಾಡಿದ ನರ್ಸ್​!

    ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದೇ ? ಸಂದೇಹದಲ್ಲಿವೆ ಹಲವು ರಾಜ್ಯಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts