ಮಳೆಗಾಲದಲ್ಲಿ ಹೆಚ್ಚು ಚಿಕನ್​ ತಿನ್ನುತ್ತೀರಾ? ಈ ಆಘಾತಕಾರಿ ಸಂಗತಿ ನಿಮಗೆ ತಿಳಿದಿರಲೇಬೇಕು..

Chicken
Published on

ಸಾಮಾನ್ಯವಾಗಿ ಹವಾಮಾನವು ಸ್ವಲ್ಪ ತಣ್ಣಗಿರುವಾಗ ಮತ್ತು ತುಂತುರು ಮಳೆಯಾದಾಗ ಬಿಸಿ ಬಿಸಿಯಾಗಿ ಏನನ್ನಾದರೂ ತಿನ್ನಬೇಕು ಎಂದು ಅನಿಸುತ್ತದೆ. ಹಲವರು ಬಜ್ಜಿ ಮತ್ತು ಪಕೋಡ ತಿಂದು ಬಯಕೆ ಈಡೇರಿಸಿಕೊಳ್ಳುತ್ತಾರೆ. ಆದರೆ, ಕೆಲವರು ಬಿಸಿ ಬಿಸಿಯಾದ ಚಿಕನ್ ಖಾದ್ಯವನ್ನು ಸವಿಯುತ್ತಾರೆ. ಮಳೆಗಾಲದಲ್ಲಿ ಅನೇಕರು ಹೆಚ್ಚಾಗಿ ನಾನ್ ವೆಜ್ ತಿನ್ನುತ್ತಾರೆ. ಅದರಲ್ಲೂ ಚಿಕನ್​ಗೆ ಆದ್ಯತೆ ನೀಡುತ್ತಾರೆ. ವಾರದಲ್ಲಿ ಕನಿಷ್ಠ ಎರಡು ದಿನ ಚಿಕನ್ ತಿನ್ನಲು ಬಯಸುತ್ತಾರೆ. ಆದರೆ ಮಳೆಗಾಲದಲ್ಲಿ ಹೆಚ್ಚು ಚಿಕನ್ ತಿನ್ನುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.

ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಎಷ್ಟೇ ತಪಾಸಣೆ ನಡೆಸಿದರು ಕೂಡ ಎಲ್ಲೋ ಒಂದು ಕಡೆ ಕೋಳಿಗಳನ್ನು ಬೇಗ ಸಾಕಲು ಆಹಾರದ ಜತೆಗೆ ನಾನಾ ಬಗೆಯ ಆ್ಯಂಟಿಬಯೋಟಿಕ್​ಗಳನ್ನು ನೀಡುತ್ತಿದ್ದಾರೆ. ಆದರೆ ಇಂತಹ ಕೋಳಿಗಳ ಮಾಂಸ ಮನುಷ್ಯರಿಗೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಸರ್ಕಾರ ಮತ್ತು ವೈದ್ಯಾಧಿಕಾರಿಗಳು ಸೂಚಿಸಿದ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್​ಗಳನ್ನು ಬಳಸಿದರೆ, ಅಂತಹ ಕೋಳಿಗಳ ಮಾಂಸ ತಿನ್ನುವುದರಿಂದ ಯಾವುದೇ ತೊಂದರೆಗಳಿಲ್ಲ. ಆದರೆ, ಕೋಳಿಗಳು ವೇಗವಾಗಿ ಬೆಳೆಯಲು ಆ್ಯಂಟಿಬಯೋಟಿಕ್‌ಗಳನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಅದರಿಂದ ಖಂಡಿತವಾಗಿಯೂ ತೊಂದರೆಯುಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಲಂಡನ್‌ನಲ್ಲಿರುವ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೋಳಿಯಲ್ಲಿ ಕೊಲಿಸ್ಟಿನ್ ಪ್ರಮಾಣ ಹೆಚ್ಚಿರುವುದನ್ನು ಪತ್ತೆ ಮಾಡಿದೆ. ಕೊಲಿಸ್ಟಿನ್ ಇರುವ ಕೊಳಿ ಮಾಂಸವನ್ನು ತಿಂದರೆ ತೊಂದರೆಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಮುಂಗಾರು ಮಳೆಯಂತಹ ಈ ಸೀಸನ್​ನಲ್ಲಿ ಇಂತಹ ಚಿಕನ್ ತಿಂದರೆ ನಮ್ಮ ದೇಹದ ರೋಗನಿರೋಧಕ ಶಕ್ತಿ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಳೆಗಾಲದಲ್ಲಿ ಇಂತಹ ಚಿಕನ್​ ತಿಂದರೆ ರೋಗಕ್ಕೆ ತುತ್ತಾಗುವ ಅಪಾಯವಿದೆ. ಅದಕ್ಕಾಗಿಯೇ ಮಾನ್ಸೂನ್ ಸಮಯದಲ್ಲಿ ಕೋಳಿ ತಿನ್ನುವುದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net