

Fitness food: ಇಂದಿನ ದಿನಗಳಲ್ಲಿ ಜನರು ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೂ, ಫಿಟ್ ಆಗಿರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಚಿಕಿತ್ಸೆಗೆ ಒಳಗಾಗುತ್ತಾರೆ. ಹಾಗಾಗಿ ದೇಹವನ್ನು ಫಿಟ್ ಆಗಿರಲು ಬಯಸುವವರು ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ಫಿಟ್ ಆಗಿರಬಹುದು.
* 1 ಕಪ್ ಓಟ್ಸ್ (ರಾತ್ರಿ ನೆನಸಿಡಿ)
* 1 ಬಾಳೆಹಣ್ಣು
* 1 ಕಪ್ ಸ್ಟ್ರಾಬೆರಿ, ಬ್ಲೂಬೆರಿ ಹಣ್ಣು
* 1 ಚಮಚ ಚಿಯಾ ಸೀಡ್ಸ್
* 1 ಕಪ್ ಮೊಸರು
ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಓಟ್ಸ್ ಮತ್ತು ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ಬಾಳೆಹಣ್ಣು, ಸ್ಟ್ರಾಬೆರಿ, ಬ್ಲೂಬೆರಿ, ಚಿಯಾ ಸೀಡ್ಸ್ ಸೇರಿಸಿ ಮಿಕ್ಸ್ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.
* 200ಗ್ರಾ ಚಿಕನ್
* 1 ಕಪ್ ಬೇಯಿಸಿದ ಕ್ವಿನೋವಾ
* ಹಸಿರು ತರಕಾರಿ
* 1 ಅವಕಾಡೋ
* 2 ಟೊಮಾಟೋ
* ಎಣ್ಣೆ
* ನಿಂಬೆ ರಸ
* ಉಪ್ಪು
* ಮೆಣಸಿನ ಪುಡಿ
ಮೊದಲು ಚಿಕನ್ಗೆ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ (ಗ್ರಿಲ್) ಸುಡಬೇಕು. ನಂತರ ಒಂದು ಪಾತ್ರಗೆ ಬೇಯಿಸಿದ ಕ್ವಿನೋವಾ, ತರಕಾರಿ, ಉಪ್ಪು, ಮೆಣಸಿನ ಪುಡಿ, ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಬೇಕು. ಈ ಆಹಾರವನ್ನು ಮಧ್ಯಾಹ್ನದ ಊಟದೊಂದಿಗೆ ಸೇವಿಸುವುದು ಉತ್ತಮವಾಗಿದೆ.
* 2 ಬೇಯಿಸಿದ ಗೆಣಸು
* 4 ಮೊಟ್ಟೆಗಳು
* ಪಾಲಕ್ ಸೊಪ್ಪು
* ಎಣ್ಣೆ
* ಉಪ್ಪು