More

    ರಾಜ್ಯದ ಹಲವೆಡೆ ಲಘು ಭೂಕಂಪನ, ಎಲ್ಲೆಲ್ಲಿ ಯಾವಾಗ?

    ಬೆಂಗಳೂರು: ರಾಜ್ಯದ ಹಲವೆಡೆ ಶನಿವಾರ ಬೆಳ್ಳಂಬೆಳಗ್ಗೆ ಭೂಕಂಪನದ ಅನುಭವವಾಗಿದೆ. ನಿದ್ದೆಯಲ್ಲಿದ್ದ ಜನರು ಗಾಬರಿಯಾಗಿದ್ದು, ಹಲವೆಡೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯಲ್ಲಿದ್ದ ಪಾತ್ರೆಗಳು ಸಹ ಕೆಳಗೆ ಬಿದ್ದ ಘಟನೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆಲವು ಕಡೆ ಭೂಮಿ ಕಂಪಿಸಿದ ಅನುಭವಾಗಿದೆ. ರಿಕ್ಷರ್​ ಮಾಪಕದಲ್ಲಿ 2.7 ಭೂಕಂಪನದ ತೀವ್ರತೆ ದಾಖಲಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ಮಾಹಿತಿ ನೀಡಿದೆ. ಬೆಳಗ್ಗೆ 9 ಗಂಟೆ 9 ನಿಮಿಷ, 48 ಸೆಕೆಂಡ್​ಗಳ ಕಾಲ ಕಂಪನದ ಅನುಭವವಾಗಿದೆ. ಸುಳ್ಳ ತಾಲೂಕಿನ ವಿವಿದೆಡೆಯೂ ಭೂಮಿ ಕಂಪಿಸಿದೆ. ಸುಳ್ಯ ನಗರ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆ ಗಳಲ್ಲಿ ಭೂ ಕಂಪನದ ಅನುಭವವಾಗಿದೆ.

    ಇನ್ನು ಕೊಡಗು ಗಡಿಭಾಗದಲ್ಲಿ ಲಘು ಭೂಕಂಪನವಾಗಿದೆ. ಜಿಲ್ಲೆಯ ಕರಿಕೆ,ತೊಡಿಕಾನ,ಪೆರಾಜೆ,ಸಂಪಾಜೆ ವ್ಯಾಪ್ತಿಯಲ್ಲಿ ಭೂಮಿ ಅಲುಗಾಡಿದೆ. ಬೆಳಿಗ್ಗೆ 9.10 ಕ್ಕೆ ಭೂಮಿಯೊಳಗೆ ಜೋರಾದ ಶಬ್ದ ಕೇಳಿಬಂದಿತ್ತು. ಇದೇ ಸಂದರ್ಭದಲ್ಲೇ ಭೂಮಿ ಅಲುಗಾಡಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ಗ್ರಾಮಗಳು, ಕೊಡಗು- ಕೇರಳ,ಕೊಡಗು- ದಕ್ಷಿಣ ಕನ್ನಡ ಗಡಿಭಾಗದಲ್ಲಿ ಭೂಕಂಪನದ ಅನುಭವವಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಸೋಮವಾರಪೇಟೆ ಭಾಗದಲ್ಲಿ ಲಘು ಭೂಕಂಪನವಾಗಿತ್ತು.

    ವಿಜಯಪುರದಲ್ಲೂ ಸಹ ಭೂಕಂಪನದ ಅನುಭವವಾಗಿದೆ. ನಗರದ ರೇಲ್ವೆಸ್ಟೇಷನ್ ಏರಿಯಾ, ಗೋಳಗುಮ್ಮಟ ಏರಿಯಾ, ಕೀರ್ತಿ ನಗರ ಸೇರಿದಂತೆ ವಿವಿಧೆಡೆ ಲಘು ಭೂಕಂಪನವಾಗಿದೆ. ಮನಗೂಳಿಯಲ್ಲಿ ಕಳೆದ ರಾತ್ರಿ 10ಗಂಟೆ 46ನಿಮಿಷಕ್ಕೆ ಭೂಮಿ ಕಂಪಿಸಿತ್ತು.

    ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಭೂಮಿ ಅಲುಗಾಡಿ ಅನುಭವವಾಗಿ, ಭಯಭೀತರಾದ ಜನರು ಮನೆಯೊಂದ ಹೊರ ಓಡಿಬಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಮನಗೂಳಿಯಲ್ಲಿ ಭೂಕಂಪನ ಆಗಿತ್ತು.ಕಳೆದ ಜನೆವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಭೂಮಿ ಕಂಪಿಸಿತ್ತು.ಇದೀಗ ಮೂರು ತಿಂಗಳ ಬಳಿಕ ಮತ್ತೆ ಲಘು ಭೂಕಂಪನವಾಗಿದೆ. ಈ ವೇಳೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಸೇರಿದಂತೆ ಹಲವು ವಿಜ್ಞಾನಿಗಳು ಭೇಟಿ ನೀಡಿದ್ದರು. (ದಿಗ್ವಿಜಯ ನ್ಯೂಸ್​)

    ಜುಲೈ ತಿಂಗಳಲ್ಲಿ 8 ದಿನಗಳು ಬ್ಯಾಂಕ್​ಗಳಿಗೆ ರಜೆ: ಯಾವಾಗ, ಎಲ್ಲೆಲ್ಲಿ ಅನ್ವಯ ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts