ಪಂಜಾಬ್: ರೂಪನಗರದಲ್ಲಿ 3.2 ತೀವ್ರತೆಯ ಭೂಕಂಪ!; ವರದಿ ಹೀಗಿದೆ

Untitled design (2)
Published on

ಪಂಜಾಬ್‌: ಪಂಜಾಬ್‌ನ ರೂಪನಗರದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಕುರಿತಂತೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಬುಧವಾರ (ನ.8) ಮಾಹಿತಿ ನೀಡಿದೆ.

ಇಂದು ನಸುಕಿನ 1:13ರ ಸುಮಾರಿಗೆ ಕಂಪನಗಳು ಸಂಭವಿಸಿವೆ ಮತ್ತು ಭೂಕಂಪದ ಆಳವು 10 ಕಿ.ಮೀ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತನ್ನ ಅಧಿಕೃತ ಟ್ವೀಟ್‌ರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಭೂಕಂಪನದ ತೀವ್ರತೆ: 3.2, 8.11.2023 ರಂದು 01:13:12 ಭಾರತದ ಪ್ರಮಾಣಿತ ಸಮಯಕ್ಕೆ (IST) ಸಂಭವಿಸಿದೆ. ಅಕ್ಷಾಂಶ: 30.93 ಮತ್ತು ರೇಖಾಂಶ: 76.43, ಆಳ: 10 ಕಿಮೀ, ಸ್ಥಳ: ರೂಪನಗರ, ಪಂಜಾಬ್ ಎಂದು ಉಲ್ಲೇಖಿಸಿ, ಟ್ವೀಟ್ ಮಾಡಿದೆ. ಘಟನೆ ಬಗ್ಗೆ ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಲಾಗಿದೆ.

ಕಳೆದ ತಿಂಗಳು ಅ.22ರ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಜಮ್ಮು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ನೇಪಾಳದಲ್ಲಿ 6.1 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net