More

  ಹರಿಯಾಣ, ಸೋನಿಪತ್​ನಲ್ಲಿ 3.0 ತೀವ್ರತೆಯ ಭೂಕಂಪ!

  ಹರಿಯಾಣ: ಭಾನುವಾರ (ನ.26) ಹರಿಯಾಣದ ಸೋನಿಪತ್​ನಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ರಿಕ್ಟರ್​ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ (NCS) ವರದಿ ನೀಡಿದೆ.

  ಇದನ್ನೂ ಓದಿ: ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ; “ಇದು ಬಹಳ ಕಷ್ಟಕರವಾದ ಮಿಷನ್, ತಾಳ್ಮೆ ಇರಬೇಕು”: ಅಟಾ ಹಸ್ನೇನ್

  ಭೂಕಂಪದ ಕೇಂದ್ರಬಿಂದುವು ಸೋನಿಪತ್‌ನಲ್ಲಿತ್ತು ಮತ್ತು ಅಕ್ಷಾಂಶ 29.15 ಡಿಗ್ರಿ ಉತ್ತರ ಮತ್ತು ರೇಖಾಂಶ 76.97 ಡಿಗ್ರಿ ಪೂರ್ವದಲ್ಲಿ 5 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದು, ಘಟನೆಯಲ್ಲಿ ಇದುವರೆಗೆ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದೆ.

  ಇದನ್ನೂ ಓದಿ: ಸಿಬ್ಬಂದಿ ಬಲಕ್ಕೆ ಸರ್ಜರಿ; ಆಡಳಿತ ಸುಧಾರಣಾ ಆಯೋಗದ ಆರನೇ ವರದಿ ಸಲ್ಲಿಕ

  ಈ ಹಿಂದೆ ಪಶ್ಚಿಮ ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿತ್ತು. ಇದಾದ ಕೆಲವು ದಿನಗಳ ಬಳಿಕ ಇಂದು ಸೋನಿಪತ್‌ನಲ್ಲಿ ಭೂಕಂಪನ ಸಂಭವಿಸಿದೆ. ಇದು ದೇಶವನ್ನು ಅಪ್ಪಳಿಸಿದ ಸತತ ಭೂಕಂಪಗಳ ಸರಣಿಗಳಲ್ಲಿ ಪ್ರಬಲವಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

  ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ; “ಇದು ಬಹಳ ಕಷ್ಟಕರವಾದ ಮಿಷನ್, ತಾಳ್ಮೆ ಇರಬೇಕು”: ಅಟಾ ಹಸ್ನೇನ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts