ಹೌತಿ ದಾಳಿಕೋರರ ಹಾವಳಿ ತಡೆಗೆ ಅಮೇರಿಕಾದೊಂದಿಗೆ ಜೈಶಂಕರ್ ಚರ್ಚೆ

us
Published on

ನವದೆಹಲಿ: ಹೌತಿ ಗುಂಪುಗಳಿಂದ ವ್ಯಾಪಾರಿ ಹಡಗುಗಳ ಮೇಲಿನ ದಾಳಿ, ಕೆಂಪು ಸಮುದ್ರದಲ್ಲಿ ಕಡಲ ಭದ್ರತೆ ಸವಾಲುಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಜೊತೆ ಸುದೀರ್ಘ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಸುಗಮಗೊಳಿಸುವ ಪ್ರಮುಖ ವಾಣಿಜ್ಯ ಕಾರಿಡಾರ್ ಬಗ್ಗೆ ಬ್ಲಿಂಕೆನ್​ ಎಂದು ಹೇಳಿದರು.

ಕೆಂಪು ಸಮುದ್ರದಲ್ಲಿ ನೌಕಾಯಾನದ ಸ್ವಾತಂತ್ರ್ಯ ರಕ್ಷಿಸುವಲ್ಲಿ ಭಾರತದೊಂದಿಗೆ ಹೆಚ್ಚಿನ ಸಹಕಾರವನ್ನು ಯುಎಸ್ ಸ್ವಾಗತಿಸಿದೆ. ಉಭಯ ದೇಶಗಳು ಈ ಪ್ರದೇಶದಲ್ಲಿ ಅಜಾಗರೂಕ ಹೌತಿ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಮುಕ್ತ ವಾಣಿಜ್ಯ ಚಟುವಟಿಕೆ, ನೌಕಾಪಡೆಗಳಿಗೆ ಅಪಾಯ ಮತ್ತು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸುವುದನ್ನು ತಡೆಯುವುದು ಸಂಭಾಷಣೆಯ ನಿರ್ಣಾಯಕ ಭಾಗವಾಗಿತ್ತು ಎಂದು ಯುಸ್​ ರಾಜ್ಯ ಇಲಾಖೆ ತಿಳಿಸಿದೆ.

ಉಭಯ ನಾಯಕರು ಇಸ್ರೇಲ್​ ಹಮಾಸ್​ ಸಂಘರ್ಷ ಉಲ್ಬಣಗಳ್ಳುವುದನ್ನು ತಡೆಯುವ ಪ್ರಯತ್ನ ಮತ್ತು ಗಾಜಾದಲ್ಲಿ ನಾಗರಿಕರಿಗೆ ಮಾನವೀಯ ನೆರವು ಹೆಚ್ಚಿಸುವ ಬಗ್ಗೆಯೂ ಚರ್ಚಿಸಿದರು. ಉಕ್ರೇನ್​ ವಿರುದ್ಧ ರಷ್ಯಾದ ಅಕ್ರಮಣಕಾರಿ ನಿಲುವಿನ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಜೈ ಶಂಕರ್​, ನಮ್ಮ ಸಂಭಾಷಣೆಯು ಕಡಲ ಭದ್ರತಾ ಸವಾಲುಗಳ ಮೇಲೆ ಕೇಂದ್ರಿಕರಿಸಿದೆ. ಪ್ರಮುಖವಾಗಿ ಕೆಂಪು ಸಮುದ್ರ ಪ್ರದೇಶ, ಗಾಜಾ, ಉಕ್ರೇನ್​ ಸಂಘರ್ಷ ಸೇರಿದಂತೆ ಪಶ್ಚಿಮ ಏಪ್ಯಾದಲ್ಲಿ ನಡೆಯುತ್ತಿರುವ ಪರಿಸ್ಥಿಯ ಕುರಿತಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net