

WWE ಖ್ಯಾತಿಯ ಕುಸ್ತಿಪಟು ಮತ್ತು ಹಾಲಿವುಡ್ ನಟ ಡ್ವೇನ್ ಜಾನ್ಸನ್ ಸೇರಿ ಪತ್ನಿ ಮತ್ತು ಮಕ್ಕಳಿಗೆ ಕರೊನಾ ಸೋಂಕು ತಗುಲಿದೆ. ಈ ವಿಚಾರವನ್ನು ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು, ಇಡೀ ಕುಟುಂಬ ಸದ್ಯ ಕ್ವಾರಂಟೈನ್ನಲ್ಲಿದ್ದೇವೆ ಎಂದಿದ್ದಾರೆ.
ಸುದೀರ್ಘ 11 ನಿಮಿಷದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ಕೋವಿಡ್ ಲಕ್ಷಣರಹಿತವಾಗಿರುವುದರಿಂದ ಭಯಪಡುವ ಅಗತ್ಯ ಇಲ್ಲ. ನಾಲ್ಕು ವರ್ಷದ ಮಗಳು ಜಾಸ್ಮಿನ್, ಎರಡು ವರ್ಷದ ಟಿಯಾನಾ ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ’ ಎಂದಿದ್ದಾರೆ.
ಅಷ್ಟೇ ಅಲ್ಲ ಸದ್ಯ ಎಲ್ಲರೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇವೆ. ನಮ್ಮ ಸಂಪರ್ಕದಲ್ಲಿದ್ದವರೂ ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುವುದರ ಜತೆಗೆ ಇನ್ನೊಬ್ಬರ ಮನೆ ಪ್ರವೇಶಕ್ಕೂ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡೇ ಮುಂದುವರಿಯಿರಿ ಎಂದಿದ್ದಾರೆ.
ಡ್ವೇನ್ ಜತೆಗೆ ಹಾಲಿವುಡ್ನ ಮತ್ತೋರ್ವ ನಟ ರಾಬರ್ಟ್ ಪ್ಯಾಟಿನ್ಸನ್ ಅವರಿಗೂ ಕರೊನಾ ಪಾಸಿಟಿವ್ ಇರುವುದು ವರದಿಯಾಗಿದೆ. (ಏಜೆನ್ಸೀಸ್)