More

    Dunki Twitter reviews: ಚಿತ್ರ ಬಿಡುಗಡೆಯಾದ ತಕ್ಷಣ ಶಾರುಖ್ ಹೊರತಾಗಿ ಈ ನಟನ ನಟನೆಗೂ ಭಾರೀ ಮೆಚ್ಚುಗೆ

    ಮುಂಬೈ: ಶಾರುಖ್ ಖಾನ್ ಅಭಿನಯದ ‘ಡಂಕಿ’ ಚಿತ್ರ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈಗಾಗಲೇ ‘ಡಂಕಿ’ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ರೀತಿಯ ಹವಾ ಎದ್ದಿತ್ತು. ಇದೀಗ ಶಾರುಖ್ ಖಾನ್ ಅಭಿಮಾನಿಗಳು ಚಿತ್ರ ವೀಕ್ಷಿಸಲು ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಚಿತ್ರಮಂದಿರದ ಹೊರಗೆ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ. ಶಾರುಖ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ ಮತ್ತು ಚಿತ್ರದ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಶಾರುಖ್‌ನಿಂದ ತಾಪ್ಸಿ, ವಿಕ್ಕಿ ಕೌಶಲ್‌ವರೆಗೆ ಅಭಿಮಾನಿಗಳು ಚಿತ್ರದ ಪಾತ್ರಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳುತ್ತಿದ್ದಾರೆ.

    ಹೌದು, ನೆಟ್ಟಿಗರು ಡಂಕಿ ಭಾವನಾತ್ಮಕ ರೋಲರ್ ಕೋಸ್ಟರ್ ಆಗಿದೆ. ನೀವು ಅದೇ ಸಮಯದಲ್ಲಿ ನಗುತ್ತೀರಿ ಮತ್ತು ಅಳುತ್ತೀರಿ. ವಿಕ್ಕಿ ಕೌಶಲ್ ನೆನಪಾಗುತ್ತಾರೆ ಎಂದು ಶಾರುಖ್ ಖಾನ್ ಜೊತೆಗೆ ವಿಕ್ಕಿ ಕೌಶಲ್ ನಟನೆಯನ್ನು ಸಹ ಕೊಂಡಾಡುತ್ತಿದ್ದಾರೆ.

    ನಿರ್ದೇಶನಕ್ಕೂ ಪ್ರಶಂಸೆ
    ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರನ್ನು ಸಹ ಹೊಗಳುತ್ತಿದ್ದಾರೆ. ಈ ಚಿತ್ರವು ಇದುವರೆಗೆ ಮಾಡಿದ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಈ ಚಿತ್ರ ಈ ದಶಕದ ಅತ್ಯುತ್ತಮ ಚಿತ್ರ ಐದಕ್ಕೆ ಐದು ಸ್ಟಾರ್ ಕೊಡಬಹುದು ಎಂದು ಟ್ವಿಟರ್ ಬಳಕೆದಾರರೊಬ್ಬರು ಕೊಂಡಾಡಿದ್ದಾರೆ.

    ಶಾರುಖ್ ನಟನೆ…
    ಓರ್ವ ಬಳಕೆದಾರರಂತೂ ಚಿತ್ರಕ್ಕೆ ಐದು ಸ್ಟಾರ್‌ಗಳನ್ನೂ ನೀಡಿ, ‘ಬಹಳ ಸಮಯದ ನಂತರ ಶಾರುಖ್ ಖಾನ್ ಅವರ ಅದ್ಭುತ ಅಭಿನಯ ನೋಡಬಹುದು. ಜೊತೆಗೆ ಶಾರುಖ್ ಅದ್ಭುತ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಜವಾನ್ ಮತ್ತು ಪಠಾಣ್ ಎರಡಕ್ಕಿಂತಲೂ ಉತ್ತಮವಾಗಿದೆ. ಇದು ನಿಜವಾದ ಸಿನಿಮಾ, ಈ ಚಿತ್ರವು ವ್ಯಕ್ತಿಯನ್ನು ಜೀವನದ ಬಗ್ಗೆ ಯೋಚಿಸುವಂತೆ ಮಾಡುತ್ತದೆ ‘ ಎಂದು ಚಿತ್ರದ ಕಥೆಯನ್ನು ಸಾಕಷ್ಟು ಹೊಗಳಿದ್ದಾರೆ.

    ಇಂಟರ್ವೆಲ್ ತನಕ ಸಿನಿಮಾ ಹೇಗಿದೆ?
    ಒಬ್ಬ ವ್ಯಕ್ತಿ ಚಿತ್ರದ ಮೊದಲಾರ್ಧವನ್ನು ಹೊಗಳುತ್ತಾ, ‘ಇಂಟರ್ವೆಲ್ ತನಕ! ರಾಜ್‌ಕುಮಾರ್ ಹಿರಾನಿ ಅವರ ಮುಂದಿನ ಮಾಸ್ಟರ್‌ಕ್ಲಾಸ್. ಹಿಂದೆಂದೂ ನೋಡಿರದ ಹಾಸ್ಯದಿಂದ ತುಂಬಿದ ಸಂಪೂರ್ಣ ಥ್ರೋಬ್ಯಾಕ್ ಚಿತ್ರವಾಗಿದೆ. ಚಿತ್ರದ ಭಾವನಾತ್ಮಕ ತಿರುಳು ಈ ದಶಕದ ಯಾವುದೇ ಚಿತ್ರಕ್ಕಿಂತ ಪ್ರಬಲವಾಗಿದೆ. ಇದು ಶಾರುಖ್ ಮತ್ತು ರಾಜ್‌ಕುಮಾರ್ ಹಿರಾನಿ ಅವರ ಅತ್ಯುತ್ತಮ ಚಿತ್ರ. ‘ಡಂಕಿ’ ಅವಿಸ್ಮರಣೀಯ ಎಂದಿದ್ದಾರೆ.

    ‘ಡಂಕಿ’ ಚಿತ್ರದ ವಿಶೇಷ 
    ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಕಾಂಬಿನೇಶನ್​​​​ನ ಮೊದಲ ಚಿತ್ರ ಡಂಕಿ, ಅಕ್ರಮವಾಗಿ ವಿದೇಶಕ್ಕೆ ಹೋಗುವ ಮತ್ತು ಅವರ ಸನ್ನಿವೇಶಗಳ ಸುತ್ತ ಸುತ್ತುತ್ತದೆ ಎಂದು ನಿರ್ದೇಶಕರು ಬಹಿರಂಗಪಡಿಸಿದ್ದಾರೆ. ‘ಡಂಕಿ’ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರಕ್ಕೆ ಹಿರಾನಿ, ಅಭಿಜತ್ ಜೋಷಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ತಾರಾಗಣದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವನ್ನು ಹಿರಾನಿ, ಗೌರಿ ಖಾನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ.

    ‘ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸಲಿದೆ’: ಬಹುನಿರೀಕ್ಷಿತ ‘ಡಂಕಿ’ಯ ಫಸ್ಟ್ ರಿವ್ಯೂ ಔಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts