ಡ್ರೈ ಫ್ರೂಟ್ಸ್ ಎಂಬ ಪೋಷಕಾಂಶಗಳ ಕಣಜ: ನಿತ್ಯ ಆಹಾರದಲ್ಲಿ ಡ್ರೈ ಫ್ರೂಟ್ಸ್ ಇದ್ರೆ ನೀವಾಗುವಿರಿ ಫಿಟ್​ ಆ್ಯಂಡ್​ ಫೈನ್​

Dry Fruits
Published on

ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಅನೇಕ ಆರೋಗ್ಯದ ಲಾಭಗಳನ್ನು ಪಡೆಯಬಹುದು. ಪ್ರತಿನಿತ್ಯದ ಆಹಾರದಲ್ಲಿ ಡ್ರೈ ಫ್ರೂಟ್ಸ್ ಅತ್ಯಗತ್ಯವಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಡ್ರೈ ಫ್ರೂಟ್ಸ್ ಉತ್ತಮ ಆಹಾರ ಅಂದ್ರೆ ತಪ್ಪಾಗೋದಿಲ್ಲ. ಡ್ರೈ ಫ್ರೂಟ್ಸ್​ಗಳಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ.

ಡ್ರೈ ಫ್ರೂಟ್ಸ್ ಅದರಲ್ಲೂ ಬಾದಾಮಿ, ಆಕ್ರೋಟ್, ಪಿಸ್ತಾ, ಶೇಂಗಾ, ಗೇರು ಬೀಜಗಳು ದೇಹಕ್ಕೆ ಉತ್ತಮವಾಗಿವೆ. ನಾವು ದಿನ ನಿತ್ಯದ ಪಥ್ಯದಲ್ಲಿ ತಾಜಾ ಹಣ್ಣು ಗಳನ್ನು ಬಳಸುವ ಕುರಿತು ಯೋಚಿಸುತ್ತೇವೆ. ಆದರೆ ಡ್ರೈ ಫ್ರೂಟ್ಸ್​ಗಳ ಬಳಕೆಯ ಕುರಿತು ತಲೆ ಕೆಡಿಸಿಕೊಳ್ಳೋಕ್ಕೆ ಹೋಗೋದಿಲ್ಲ. ಡ್ರೈ ಫ್ರೂಟ್ಸ್‍ಗಳೆಂದರೆ ಬಾದಾಮಿ ಆಕ್ರೋಟ್, ಪಿಸ್ತಾ ಗೇರು ಬೀಜಗಳೇ ಅಲ್ಲ, ಬದಲಾಗಿ ಆಯಪಲ್, ಏಪ್ರಿಕೋಟ್, ನೆಲ್ಲಿಕಾಯಿ ಮತ್ತು ಮಾವುಗಳನ್ನೂ ಒಣಗಿಸಿ ಉಪಯೋಗಿಸಲಾಗುತ್ತದೆ. ಇತ್ತೀಚೆಗೆ ಪೈನ್ ಆಪಲ್ ಗಳನ್ನೂ ಕೂಡ ಒಣಗಿಸಿ ಉಪಯೋಗಿಸಲಾಗ್ತಿದೆ.

ಈ ಡ್ರೈಫ್ರೂಟ್ಸ್​ಗಳು ದೇಹದ ತೂಕ ಹೆಚ್ಚಾಗಿಸುತ್ತೆ ಅನ್ನೋದಕ್ಕಿಂತ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಯಾವೆಲ್ಲಾ ಡ್ರೈಫ್ರೂಟ್ಸ್ ಗಳನ್ನು ಸೇವಿಸಿ ತೂಕ ಇಳಿಸಿಕೊಳ್ಳಬಹುದು ಅನ್ನೋದನ್ನ ನೋಡೋಣ.

ಡ್ರೈಫ್ರೂಟ್ಸ್​ನಲ್ಲಿನ ಅತ್ಯಧಿಕ ಪ್ರಮಾಣದ ಪಾಲಿಫಿನಾಲ್ ಆಂಟಿಆಕ್ಸಿಡೆಂಟ್ ಅಂಶಗಳು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಡ್ರೈ ಫ್ರೂಟ್ಸ್ ಸೇವನೆಯಿಂದ ರಕ್ತಸಂಚಾರ ಉತ್ತಮವಾಗುತ್ತೆ. ದೇಹದಲ್ಲಿನ ಒತ್ತಡವನ್ನು ನಿಯಂತ್ರಣಕ್ಕೆ ತಂದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಡ್ರೈಫ್ರೂಟ್ಸ್​ಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕೂಡ ಕಡಿಮೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೊಂದಿದೆ. ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾಗಲು ಕಾರಣವಾಗುವ ಸೋಡಿಯಂ ಅಂಶ ಡ್ರೈಫ್ರೂಟ್ಸ್​ಗಳಲ್ಲಿ ತುಂಬಾ ಕಡಿಮೆ ಇರುತ್ತದೆ. ಸಕ್ಕರೆ ಕಾಯಿಲೆಯ ನಿಯಂತ್ರಣದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ ಬಾದಾಮಿ ಬೀಜಗಳು ಬಾದಾಮಿ ಬೀಜಗಳು ನೈಸರ್ಗಿಕವಾದ ರೂಪದಲ್ಲಿ ಅತ್ಯುತ್ತಮವಾದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ನಿಯಂತ್ರಣ ಮಾಡುತ್ತದೆ. ಬಾದಾಮಿ ಬೀಜಗಳನ್ನು ನಿಯಮಿತವಾಗಿ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚಾಗಿ ಅಂಗಾಂಗಗಳಿಗೆ ಅವಶ್ಯಕವಾಗಿ ಬೇಕಾಗಿರುವ ಪ್ರೋಟಿನ್ ಮತ್ತು ನಾರಿನ ಅಂಶ ಪೂರೈಕೆಯಾಗುವಂತೆ ಮಾಡುತ್ತದೆ ಪ್ರೋಟಿನ್ ಮತ್ತು ನಾರಿನ ಅಂಶ ಶಕ್ತಿವೃದ್ಧಿಸಲು ಸಹಕಾರಿಯಾಗಿದೆ.

ಖರ್ಜೂರ ಬಹಳಷ್ಟು ಹಿಂದಿನ ಕಾಲದಿಂದಲೂ ಸೇವಿಸುತ್ತಾ ಬರಲಾಗಿದೆ. ಖರ್ಜೂರದ ಸೇವನೆಯಿಂಜ ವಿವಿಧ ಬಗೆಯ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇತರೆ ಡ್ರೈಫ್ರೂಟ್ಸ್ ಗಳಿಗೆ ಹೋಲಿಸಿದ್ರೆ ಖರ್ಜೂರದಲ್ಲಿ ಹೆಚ್ಚು ನೈಸರ್ಗಿಕವಾದ ಸಕ್ಕರೆ ಅಂಶ ಇದೆ. ಅಪಾರ ಪ್ರಮಾಣದ ನಾರಿನಂಶ ಒಳಗೊಂಡಿರುವ ಕಾರಣದಿಂದ ಹೊಟ್ಟೆ ಹಸಿವಿನ ನಿಯಂತ್ರಣ ಮಾಡುವುದರ ಜೊತೆಗೆ ದೇಹದಲ್ಲಿ ಬೊಜ್ಜು ಶೇಖರಣೆಯಾಗದಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಶಕ್ತಿ ಕೂಡ ಹೆಚ್ಚಾಗಲು ಇದು ಕಾರಣವಾಗುತ್ತದೆ.

ವಾಲ್ ನಟ್ ಅನ್ನು ಸಣ್ಣಮಕ್ಕಳಿಗೆ ಪ್ರತಿ ದಿನ ಇದನ್ನು ಸೇವಿಸಲು ನೀಡುವುದರಿಂದ ಮೆದುಳಿನ ಬೆಳವಣಿಗೆಗೆ ಅನುಕೂಲವಾಗುತ್ತದೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹೃದಯದ ಕಾರ್ಯ ನಿರ್ವಹಣೆಗೆ ಆಗುವ ಅಡೆತಡೆಗಳನ್ನು ಸಹ ತಡೆಗಟ್ಟುತ್ತದೆ. ಪಿಸ್ತಾದಲ್ಲಿ ಗ್ಲೈಸಮಿಕ್ ಅಂಶ ಕಡಿಮೆಯಿರುವುದರಿಂದ ಅದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ರಹಿತವಾಗಿದೆ. ಹೃದಯಕ್ಕೆ ರಕ್ತಪರಿಚಲನೆ ಸರಾಗವಾಗಿಸುತ್ತದೆ. ಗೋಡಂಬಿಯಲ್ಲಿ ವಿಟಮಿನ್ ಇ ಅಂಶ ಸಮೃದ್ಧವಾಗಿದ್ದು, ಇದು ನಮ್ಮ ದೇಹಕ್ಕೆ ಸರಿಯಾದ ರಕ್ತಪರಿಚಲನೆ ಮಾಡುವಲ್ಲಿಸಹಕರಿಸುತ್ತದೆ.

ಡ್ರೈಫ್ರೂಟ್ಸ್‍ಗಳಲ್ಲಿ ನಾರಿನಂಶ ಮತ್ತು ಖನಿಜಾಂಶಗಳು ಹೇರಳವಾಗಿರುತ್ತೆ. ಇದರಿಂದ ಒಮೇಗಾ-3ಯಂತಹ ಒಳ್ಳೆಯ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಪೂರಕ. ಇವು ಹೃದಯಕ್ಕೆ ಚೈತನ್ಯ ನೀಡುತ್ತದೆ ಮತ್ತು ಡ್ರೈಫ್ರೂಟ್ಸ್‍ಗಳ ಹಿತ-ಮಿತದ ಸೇವನೆಯು ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ ಮತ್ತು ಹೃದಯಾಘಾತವನ್ನು ತಪ್ಪಿಸುತ್ತದೆ. ಬಾದಾಮಿಯಿಂದ ಮೆದುಳು ಚುರುಕಾಗಿ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಅಂಜೂರದ ಹಣ್ಣುಗಳು ನಿಶಕ್ತಿ, ಮಧುಮೇಹ ಮತ್ತು ರಕ್ತ ಸಂಚಾರಕ್ಕೆ ಒಳ್ಳೆಯದು. ರೆಸಿನ್ಸ್ ಚರ್ಮ ಮತ್ತು ದೇಹದ ಚಟುವಟಿಕೆಗೆ ಒಳ್ಳೆಯದು. ರೆಸಿನ್ಸ್ ನಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಬಾದಾಮಿಯಂತೆ ರೆಸಿನ್ಸ್ ನ್ನು ರಾತ್ರಿ ನೀರಿನಲ್ಲಿ ನೆನೆಸಲು ಹಾಕಿ ಬೆಳಿಗ್ಗೆ ತಿನ್ನಬೇಕು. ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲರಿ ಹಾಗೂ ಕೊಬ್ಬು ಇರುವ ಕಾರಣ ಅದನ್ನು ಹೆಚ್ಚಿಗೆ ಸೇವನೆ ಮಾಡಬಾರದು. ತೂಕ ಇಳಿಸುವ ಆಹಾರ ಕ್ರಮದಲ್ಲಿ ಗೋಡಂಬಿ ಕಡೆಗಣಿಸಿ.

ಆಹಾರ ತಜ್ಞರ ಪ್ರಕಾರ, ನಿಮ್ಮ ಆಯ್ಕೆಯ ಯಾವುದೇ ಒಣಫಲವನ್ನು ದಿನಕ್ಕೆ ನಾಲ್ಕರಿಂದ ಐದು ಬಗೆಯ ಒಣಫಲಗಳಿಗೆ ಮಿತಿಗೊಳಿಸಬೇಕು. ಉದಾಹರಣೆಗೆ ಸುಮಾರು ಹತ್ತರಷ್ಟು ಬಾದಾಮಿಗಳು, ಒಮೆಗಾ 3 ಕೊಬ್ಬಿನ ಆಮ್ಲದಿಂದ ಸಮೃದ್ಧವಾಗಿರುವ ಅಕ್ರೋಟು ಒಂದು ಸಾಕು, ಸುಮಾರು ಆರರಿಂದ ಏಳು ಪಿಸ್ತಾಗಳು, ನಾಲ್ಕರಿಂದ ಐದು ಗೋಡಂಬಿ, ಕೆಲವಾರು ನೆಲಗಡಲೆ ಇಷ್ಟಾದರೆ ಸಾಕು. ಈ ಒಣಫಲಗಳನ್ನು ಉಪ್ಪಿಲ್ಲದೇ ಇರುವ, ಯಾವುದೇ ಕೃತಕ ಬಣ್ಣ ಅಥವಾ ರುಚಿಕಾರಕಗಳನ್ನು ಸೇರಿಸದೇ ಇರುವಂತಹದ್ದನ್ನೇ ಆಯ್ದುಕೊಳ್ಳಿ. ಏಕೆಂದರೆ ಹೀಗೆ ಸವರುವ ಯಾವುದೇ ಮಸಾಲೆಯಿಂದ ಈ ಫಲಗಳ ಪೌಷ್ಟಿಕ ಮೌಲ್ಯಗಳು ಹೆಚ್ಚುತ್ತವೆ ಹಾಗೂ ಅನಗತ್ಯ ಪ್ರಮಾಣದ ಉಪ್ಪು ದೇಹ ಸೇರಿದಂತಾಗುತ್ತದೆ.

ಒಣ ಹಣ್ಣುಗಳಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು, ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಅವುಗಳನ್ನು ಸೇವಿಸಿ. ನೆನೆಸಿದ ಹಣ್ಣುಗಳನ್ನು ಊಟದ ಮೊದಲು ತೆಗೆದುಕೊಳ್ಳಬಹುದು. ಬಾದಾಮಿ ಮತ್ತು ವಾಲ್‌ ನಟ್ಸ್ ಗಳನ್ನು ವಿಶೇಷವಾಗಿ ರಾತ್ರಿಯಿಡೀ ನೆನೆಸಿಟ್ಟು ತೆಗೆದುಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ಸಿರಿಧಾನ್ಯ ಹಾಗೂ ಡ್ರೈ ಫ್ರೂಟ್ಸ್​ಗಾಗಿ ಸಂಪರ್ಕಿಸಿ: ಜೀವಿತಾ ಎಂಟರ್ ಪ್ರೈಸಸ್ ಯರಗುಂಟೆ, ಶಿರಾ ತಾಲೂಕು, ತುಮಕೂರು ಜಿಲ್ಲೆ.

ಮೊಬೈಲ್​ ನಂಬರ್​: 7624931166

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net