'ಅವರ ಹೊಟ್ಟೆಗೆ ಎಣ್ಣೆ ಇಳಿದಿತ್ತು..ಇವರು ಸುಮ್ಮನೆ ಹೋಗಿ ಸಿಕ್ಕಿಬಿದ್ರು...'; ಮಾಗಡಿ ಶಾಸಕನಿಗೆ ಕುಡುಕರ ಆವಾಜ್​...!

Enne 4 may 20
Published on

ರಾಮನಗರ: ಇವತ್ತು ಕುಡುಕರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ. ರಾಜ್ಯದೆಲ್ಲೆಡೆ ಮದ್ಯಪ್ರಿಯರೇ ಇಂದು ಕೇಂದ್ರ ಬಿಂದು.

ಅದರಲ್ಲೂ ರಾಮನಗರದಲ್ಲಂತೂ ಒಂದಷ್ಟು ಜನ ಬೆಳ್ಳಂಬೆಳಗ್ಗೆ ಫುಲ್​ ಟೈಟ್​ ಆಗಿ, ಮಾಗಡಿ ಶಾಸಕ ಎ. ಮಂಜು ಅವರಿಗೆ ಬಹಿರಂಗವಾಗಿ ಆವಾಜ್​ ಹಾಕಿದ್ದಾರೆ. ಮಾಗಡಿ ತಾಲೂಕಿನ ಬಸವನಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ.

ಎ.ಮಂಜು ಅವರು ನೀಡಿದ್ದ ಹಳೇ ಭರವಸೆಗಳನ್ನೆಲ್ಲ ನೆನಪಿಸಿಕೊಂಡು ಬೈದಿದ್ದಾರೆ. ಎಣ್ಣೆ ಹೊಟ್ಟೆಗೆ ಹೋಗುತ್ತಿದ್ದಂತೆ ಡೋಂಟ್ ಕೇರ್​ ಮೂಡ್​ಗೆ ಜಾರಿದ ಒಂದಷ್ಟು ಜನರು, ಎ. ಮಂಜು ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ.

ರಸ್ತೆ ಕಾಮಗಾರಿ ಪೂಜೆಗೆ ಸಂಬಂಧಪಟ್ಟಂತೆ ಎ. ಮಂಜು ಅವರು ಇಂದು ಬಸವನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಷ್ಟರಲ್ಲಾಗಲೇ ಕುಡಿದು, ಟೈಟ್​ ಆಗಿದ್ದವರು, ಗ್ರಾಮದ ಹಾಲಿನ ಡೇರಿ ಸೂಪರ್ ಸೀಡ್ ಆದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಶಾಸಕರಿಗೆ ಬಹಿರಂಗವಾಗಿ ಆವಾಜ್​ ಹಾಕಿದ್ದಾರೆ. ನಮ್ಮೂರಿನಲ್ಲಿ ಏನು ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net