

ಲಖನೌ: ಮಳೆ ಬರುತ್ತಿದ್ದರು ವ್ಯಕ್ತಿಯೊಬ್ಬರು ರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ವಾಹನಗಳ ಓಡಾಟಕ್ಕೆ ತೊಂದರೆಯನ್ನುಂಟು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಶ್ಚರ್ಯ ಎಂದರೆ ಪೊಲೀಸ್ ಬೂತ್ ಎದುರು ವ್ಯಕ್ತಿ ಈ ರೀತಿ ವರ್ತಿಸಿದ್ದಾನೆ. ಬಹುಶಃ ಅಲ್ಲಿ ಯಾವೊಬ್ಬ ಪೊಲೀಸರು ಇರಲಿಲ್ಲ ಎಂದು ಕಾಣಿಸುತ್ತದೆ. ಕೊನೆಗೆ ಆ ರಸ್ತೆಯಲ್ಲಿ ಬಂದ ಟ್ರಕ್ವೊಂದು ಆತನಿಗೆ ಡಿಕ್ಕಿ ಹೊಡಿದಿದೆ.
ಸದ್ಯ ಈ ವಿಡಿಯೋ ಉತ್ತರ ಪ್ರದೇಶದ ಪ್ರತಾಪಗಢದ್ದು ಎನ್ನಲಾಗಿದೆ. 17 ಸೆಕೆಂಡ್ಗಳಿರುವ ಈ ಕ್ಲಿಪ್ನಲ್ಲಿ ಜನರು ಮತ್ತು ವಾಹನಗಳು ಓಡಾಡುವ ರಸ್ತೆಯಲ್ಲಿ ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿ ಬೇರೆ ಯಾವುದೇ ಬಟ್ಟೆ ತೊಡದೆ ರಸ್ತೆ ಮಧ್ಯದಲ್ಲಿ ಕುರ್ಚಿ ಮೇಲೆ ಕುಳಿತಿರುವುದನ್ನು ಕಾಣಬಹುದು. ಅವರನ್ನು ಅಲ್ಲಿ ಓಡಾಡುವವರೆಲ್ಲಾ ನೋಡುತ್ತಾ ಅಪಹಾಸ್ಯ ಮಾಡಿದರು ಆ ವ್ಯಕ್ತಿ ತನಗು ಅದಕ್ಕೂ ಸಂಬಂಧವೆ ಇಲ್ಲ ಎನ್ನುವಂತೆ ಕುಳಿತಿದ್ದಾನೆ. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬಂದ ಟ್ರಕ್ ಒಂದು ಆತನಿಗೆ ಡಿಕ್ಕಿ ಹೊಡೆದಿದೆ. ಆ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ಅಲ್ಲಿದ್ದವರು ಟ್ರಕ್ ಚಾಲಕನಿಗೆ ಸಿಗ್ನಲ್ ಮಾಡಿ ಮುಂದೆ ಹೋಗುವಂತೆ ಹೇಳಿದ್ದಾರೆ. ಕೆಳಗೆ ಬಿದ್ದವನು ಸುತ್ತ ನೋಡುತ್ತಾ ನಾನೇಗೆ ಬಿದ್ದೆ ಎಂದು ಆಲೋಚಿಸಿತ್ತಿದ್ದಾನೆ ಎನ್ನುವುದು ವಿಡಿಯೋದಲ್ಲಿ ನೋಡಬಹುದು.
ಘಟನೆ ಬಳಿಕ ಆ ವ್ಯಕ್ತಿಗೆ ಗಾಯವಾಗದೆ ಸಂಪೂರ್ಣವಾಗಿ ಚೆನ್ನಾಗಿದ್ದಾನೆ ಎಂಬುದು ತಿಳಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಟ್ರಕ್ ಚಾಲಕ ಸರಿಯಾದ ಕೆಲಸ ಮಾಡಿದ್ದಾರೆ, ಆ ವ್ಯಕ್ತಿಗೆ ಏನಾದರೂ ಆಗಿದ್ದರೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿತ್ತು ಆಗ ಟ್ರಕ್ ಚಾಲಕ ಪರಾರಿಯಾಗಬೇಕಿತ್ತು, ಕೆಳಗೆ ಬಿದ್ದ ವ್ಯಕ್ತಿ ಸಿಂಹಾಸನದಿಂದ ನನ್ನನ್ನು ಕೆಳಗಿಳಿಸಿದವರು ಯಾರು ಎಂದು ಆಶ್ಚರ್ಯ ಪಡುತ್ತಿದ್ದಾನೆ ಎಂದು ಹೀಗೆ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ ವಿಚಾರ ತಿಳಿದು ತನಿಖೆ ನಡೆಸಿದ ಪೊಲೀಸರು ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಆತನ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್)