ರಾಜ್ಯಕ್ಕೆ ಎಲ್ಲಿಂದ ಬರುತ್ತೆ ಡ್ರಗ್ಸ್? ಈ ಬಗ್ಗೆ ಪೊಲೀಸ್​ ಮಹಾನಿರ್ದೇಶಕರಿಂದ ಸ್ಫೋಟಕ ಮಾಹಿತಿ

praveen sood
Published on

ಹುಬ್ಬಳ್ಳಿ: ಡ್ರಗ್ಸ್​ ಮಾಫಿಯಾ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅದನ್ನ ಮಟ್ಟ ಹಾಕಲು ಪೊಲೀಸ್​ ಪಡೆ ಸನ್ನದ್ಧವಾಗಿದೆ ಎಂದು ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್ ಹೇಳಿದ್ದಾರೆ.

ರಾಜ್ಯಕ್ಕೆ ಆಂಧ್ರಪ್ರದೇಶ ಮತ್ತು ಗೋವಾದಿಂದ ಡ್ರಗ್ಸ್ ಸಪ್ಲೈ ಆಗುತ್ತಿದೆ. ಈ ಮಾಫಿಯಾ ನಿರಂತರ ಜಾಲವಾಗಿದ್ದು, ಇದನ್ನು ಬೇರು ಸಮೇತ ಕಿತ್ತೊಗೆಯಲು ಪೊಲೀಸರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ನಿರಂತರ ದಾಳಿ ನಡೆಸಿ ಡ್ರಗ್ಸ್​ ಜಾಲ ಭೇದಿಸುತ್ತಿದ್ದಾರೆ‌ ಎಂದ ಪ್ರವೀಣ್​ ಸೂದ್, ಬೆಂಗಳೂರು ಮಾತ್ರವಲ್ಲ, ರಾಜ್ಯದ ವಿವಿಧ ಪಟ್ಟಣಗಳಲ್ಲೂ ಡ್ರಗ್ಸ್​ ಮಾಫಿಯಾ ಇದೆ ಎಂದರು. ಇದನ್ನೂ ಓದಿರಿ ಚಂದನವನದಲ್ಲಿ ಅನಿಕಾಳ ಡ್ರಗ್ಸ್ ದಂಧೆ ಹೀಗಿತ್ತು… ‘ಲವ್ ಡೋಸ್’, ‘ಬಿ ಮನಿ’ ಅಂದ್ರೇನು ಗೊತ್ತಾ?

ಡ್ರಗ್ಸ್ ಮಾಫಿಯಾ ಕರ್ನಾಟಕದಲ್ಲೂ ಸದ್ದು ಮಾಡುತ್ತಿದೆ. ಎನ್​ಸಿಬಿ ಹಾಗೂ ಸಿಸಿಬಿ ಯವರು ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ. ತನಿಖೆ ಒಂದು ಹಂತಕ್ಕೆ ತಲುಪಿದ ನಂತರ ಹೆಸರು ಹಾಗೂ ವಿವರಗಳನ್ನ ಬಹಿರಂಗ ಪಡಿಸಬಹುದು ಎಂದರು.

ಕೋವಿಡ್ ಸಂದರ್ಭದಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದ ತಿಳಿಸಲು ರಾಜ್ಯ ಪ್ರವಾಸ ಮಾಡುತ್ತಿರುವೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯನ್ನು ಜೀರೋ ಲೇವಲ್ ಮಾಡಲು ನೇಮಕಾತಿ ಸಹ ನಡೆಯಿತ್ತಿದೆ. ಕರೊನಾ ನಂತರ ಅಪರಾಧ ಚಟುವಟಿಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಪೊಲೀಸರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ. 'ಡಯಲ್ 100' ಮತ್ತಷ್ಟು ಆ್ಯಕ್ಟೀವ್ ಆಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net