

ಬೆಂಗಳೂರು: ಡ್ರಗ್ಸ್ ಕೇಸ್ ಪ್ರಕರಣ ಸಂಬಂಧ ಐಎಸ್‍ಡಿ(ಆಂತರಿಕ ಭದ್ರತಾ ವಿಭಾಗ) ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಶಾಂತಿನಗರದ ಕಚೇರಿಯಲ್ಲಿ ಮಂಗಳವಾರ ವಿಚಾರಣೆ ಎದುರಿಸಿ ಹೊರ ಬಂದ ಕಿರುತೆರೆ ನಟಿ ಗೀತಾ ಭಾರತಿ ಭಟ್, 'ನಾನು ಯಾವುದೇ ಪೆಡ್ಲರ್ ಅಲ್ಲ' ಎಂದರು.
ಸತತ ಐದು ಗಂಟೆ ಕಾಲ ವಿಚಾರಣೆ ಎದುರಿಸಿದ 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, ಐಎಸ್‍ಡಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದರು. ನನಗೆ ಐಎಸ್‍ಡಿ ಅಧಿಕಾರಿಗಳು 40 ಪ್ರಶ್ನೆ ಕೇಳಿದ್ದಾರೆ. ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ನನ್ನ ಮೊಬೈಲ್ ಸಹ ಚೆಕ್ ಮಾಡಿದ್ರು. ಇದೊಂದು ನನ್ನ ಪಾಲಿಗೆ ಹೊಸ ಎಕ್ಸ್ಪೀರಿಯನ್ಸ್... ಎಂದರು. ಇದನ್ನೂ ಓದಿರಿ ಡ್ರಗ್ಸ್ ಕೇಸ್: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್ಗೆ ಐಎಸ್‍ಡಿ ಡ್ರಿಲ್
ನಾನು ಯಾವುದೇ ಪಾರ್ಟಿಗಳಿಗೆ ಹೋಗಲ್ಲ. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದ ಗೀತಾ, ಇದೊಂದು ನನ್ನ ಪಾಲಿಗೆ ಹೊಸ ಎಕ್ಸ್ಪೀರಿಯನ್ಸ್. ಇದನ್ನು ವಿಚಾರಣೆ ಅನ್ನೋದಕ್ಕಿಂತ ಲೈವ್ಲಿ ಚಾಟ್ ಅನ್ನಬಹುದು. ಮತ್ತೆ ವಿಚಾರಣೆಗೆ ಕರೆದರೆ ಖಂಡಿತ ಬರ್ತೀನಿ ಎಂದರು.