

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಮಾಜಿ ಸಚಿವರೊಬ್ಬರ ಪುತ್ರನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಬಂಧಿತ ಆರೋಪಿ. ಡ್ರಗ್ಸ್ ಪೆಡ್ಲರ್ಗಳಿಗೆ ಗೋವಾದಲ್ಲಿ ಆ್ರಯ ನೀಡಿದ್ದ ಆರೋಪದ ಮೇರೆ ಪೊಲೀಸರು ದರ್ಶನ್ ಲಮಾಣಿಯನ್ನು ಬಂಧಿಸಿದ್ದಾರೆ.
ಡಾರ್ಕ್ ವೆಬ್ ಸೈಟ್ನಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದವರ ಜಾಡು ಹಿಡಿದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನವೆಂಬರ್ 4ರಂದು ದಾಳಿ ನಡೆಸಿದ್ದರು. ಫಾರಿನ್ ಪೋಸ್ಟ್ ಆಫೀಸ್‌ಗೆ ವಿದೇಶದಿಂದ ಡ್ರಗ್ಸ್ ಪಾರ್ಸೆಲ್ ಬರುತಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಆರೋಪಿ ಸುಜಯ್ ಎಂಬಾತ ಗಾಂಜಾ ಸಮೇತ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದ.
ಸುಜಯ್ ವಿಚಾರಣೆ ವೇಳೆ ಇನ್ನಿಬ್ಬರು ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಹೇಮಂತ್ ಮತ್ತು ಸುನೀಶ್ ಗೋವಾದಲ್ಲಿ ಪತ್ತೆಯಾಗಿದ್ದರು. ಇವರ ಜತೆಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಯನ್ನೂ ಅರೆಸ್ಟ್ ಮಾಡಲಾಗಿದೆ.
ಹೇಮಂತ್ ಮತ್ತು ಸುನೀಶ್‌ಗೆ ಗೋವಾದಲ್ಲಿ ದರ್ಶನ್ ಲಮಾಣಿ ಆಶ್ರಯ ನೀಡಿದ್ದ. ಡ್ರಗ್ಸ್ ಪೆಡ್ಲರ್ಗಳ ಜತೆ ದರ್ಶನ್ ಲಮಾಣಿಗೆ ನಿಕಟ ಸಂಪರ್ಕ ಇತ್ತು ಎನ್ನಲಾಗಿದೆ.