ಗೋಕರ್ಣ ತೀರದಲ್ಲಿ ವಿದ್ಯಾರ್ಥಿ ಜಲ ಸಮಾಧಿ

Drowning
Published on

ಗೋಕರ್ಣ: ವಿದ್ಯಾರ್ಥಿಯೊಬ್ಬ ಕಡಲ ಅಲೆಗೆ ಸಿಲುಕಿ ನಾಪತ್ತೆಯಾದ ಘಟನೆ ಸಮೀಪದ ಬುಧವಾರ ಬಾವಿಕೋಡ್ಲು ಬಳಿ ಸಂಭವಿಸಿದೆ. ಅಪಾಯಕ್ಕೆ ಸಿಲುಕಿದ ಇನ್ನೂ ಐವರು ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಕೋಲಾರ ಶ್ರೀನಿವಾಸಪುರದ ವಿನಯ ಎಸ್‌.ವಿ. (22) ಸಮುದ್ರದಲ್ಲಿ ನಾಪತ್ತೆಯಾದ ವಿದ್ಯಾರ್ಥಿ.

ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಜ್ ನ 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಮುಖ್ಯ ಕಡಲತೀರದಲ್ಲಿ ಅಲೆಯ ಅಬ್ಬರ ಜಾಸ್ತಿ ಇರುವ ಕಾರಣಕ್ಕೆ ಅಲ್ಲಿನ ಲೈಫ್ ಗಾರ್ಡ್ ಗಳು ಈಜಲು ಅವಕಾಶ ನೀಡದಿದ್ದರಿಂದ ಅಲ್ಲಿಂದ ದುಬ್ಬನಸಸಿ ತೀರಕ್ಕೆ ತೆರಳಿ ಈಜಲು ಸಮುದ್ರಕ್ಕೆ ಇಳಿಸಿದಿದ್ದರು.

ಸ್ಥಳೀಯ ಸರ್ವೇಶ ಮೊರ್ಜೆ, ಪಂಢರಿನಾಥ ಮೂರ್ಜೆ ಎಂಬುವವರು ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಕರಾವಳಿ ಕಾವಲು ಪೊಲೀಸ ಪಡೆಯ ಸಹಕಾರದಿಂದ ಐವರನ್ನು ರಕ್ಷಣೆ ಮಾಡಲಾಗಿದೆ. ಅಸ್ವಸ್ಥಗೊಂಡ ಐವರನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗೋಕರ್ಣ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net