ಅಂಜುಂಗೆ ಖೇಲ್​ರತ್ನ, ಜಸ್ಪಾಲ್​ಗೆ ದ್ರೋಣಾಚಾರ್ಯ?

shot
Published on

ನವದೆಹಲಿ: ಅನುಭವಿ ರೈಫಲ್ ಶೂಟರ್ ಅಂಜುಂ ಮೌದ್ಗಿಲ್ ಹಾಗೂ ಶೂಟಿಂಗ್ ಕೋಚ್ ಜಸ್ಪಾಲ್ ರಾಣಾ ಹೆಸರನ್ನು ಕ್ರಮವಾಗಿ ಖೇಲ್​ರತ್ನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಭಾರತೀಯ ರೈಫಲ್ ಸಂಸ್ಥೆ (ಎನ್​ಆರ್​ಎಐ) ಶಿಫಾರಸು ಮಾಡಿದೆ. ಜಸ್ಪಾಲ್ ರಾಣಾ ಹೆಸರನ್ನು ಸತತ 2ನೇ ಬಾರಿಗೆ ಶಿಫಾರಸು ಮಾಡಲಾಗಿದೆ.

ಜತೆಗೆ ಪಿಸ್ತೂಲ್ ಶೂಟರ್​ಗಳಾದ ಸೌರಭ್ ಚೌಧರಿ, ಅಭಿಷೇಕ್ ವರ್ಮ, ಮನು ಭಾಕರ್ ಮತ್ತು ರೈಫಲ್ ಶೂಟರ್ ಇಲವೆನಿಲ್ ವಲಾರಿವನ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಎನ್​ಆರ್​ಎಐ ಅಧ್ಯಕ್ಷ ರಾಣಿಂದರ್ ಸಿಂಗ್ ಹೇಳಿದ್ದಾರೆ.

‘ಪ್ರಶಸ್ತಿಗೆ ಎಲ್ಲರೂ ಆರ್ಹರಾಗಿದ್ದಾರೆ. ಉತ್ತಮ ನಿರ್ವಹಣೆ ತೋರಿರುವ ಶೂಟರ್​ಗಳ ಹೆಸರನ್ನು ಶಿಫಾರಸು ಮಾಡಿದ್ದೇವೆ. ಮನು ಹಾಗೂ ಇಲವೆನಿಲ್ ಹೆಸರನ್ನು ಗುರುವಾರ ಅಂತಿಮಗೊಳಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.

2008ರಿಂದ ಶೂಟಿಂಗ್​ನಲ್ಲಿ ಸ್ಪರ್ಧಿಸುತ್ತಿರುವ 26 ವರ್ಷದ ಮೌದ್ಗಿಲ್, ಟೋಕಿಯೊ ಒಲಿಂಪಿಕ್ಸ್​ಗೆ

ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲಿಬ್ಬರಲ್ಲಿ ಒಬ್ಬರಾಗಿದ್ದರು. ಏಷ್ಯನ್ ಗೇಮ್ಸ್​ನಲ್ಲಿ ಹಲವು ಸ್ವರ್ಣ ಪದಕ ಜಯಿಸಿರುವ 43 ವರ್ಷದ ಜಸ್ಪಾಲ್ ರಾಣಾ, ಯುವ ಶೂಟರ್​ಗಳಾದ ಮನು ಭಾಕರ್, ಸೌರಭ್ ಮತ್ತು ಅನಿಶ್ ಬಾನ್​ವಾಲಗೆ ತರಬೇತಿ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net