ಹೇಗಿದೆ ನೋಡಿ ಈ ಚನ್ನಿಗರಾಯನ ಮದ್ಯದ ಚಪಲ...!

drinks
Published on

ಬಣಕಲ್ (ಮೂಡಿಗೆರೆ): ಈತನಿಗೆ ಮದ್ಯದ ಚಪಲ... ಕುಡಿಯಲೇಬೇಕು. ಸ್ಕೂಟರ್ ಸೀಟಿನ ಅಡಿಯಲ್ಲಿ ಇರುವ ಡಿಕ್ಕಿಯಲ್ಲಿ ಬಾಟಲಿ ಇದೆ. ಆದರೆ ಅದನ್ನು ತೆಗೆಯಲು ಆಗುವುದಿಲ್ಲ, ಯಾಕೆಂದರೆ ಕೀ ಕಳೆದುಹೋಗಿದೆ. ಏನು ಮಾಡೋದು?

ಸೀಟಿಗೆ ಬ್ಲೇಡ್ ಹಾಕಿ, ಜಜ್ಜಿ ತೆಗೆದು, ಬಾಕ್ಸ್‌ಗೆ ರಂಧ್ರ ಮಾಡಿದ್ದಾನೆ. ಆದರೂ ಬಾಟಲಿಯನ್ನು ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಆದರೇನಂತೆ. ಬಾಟಲಿ ಬಾಯಿ ತೆರೆದು ತಂಪು ಪಾನೀಯ, ಎಳನೀರು ಕುಡಿಯುವಂತೆ ಸ್ಟ್ರಾ ಬಳಸಿ ಮದ್ಯ ಕುಡಿದಿದ್ದಾನೆ

ಈ ಘಟನೆ ನಡೆದಿರುವುದು ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದಲ್ಲಿ. ಬಾರ್‌ನಲ್ಲಿ ಮದ್ಯ ಖರೀದಿಸಿದ ವ್ಯಕ್ತಿ ಬಾಟಲಿಯನ್ನು ಸ್ಕೂಟರ್ ಡಿಕ್ಕಿಯಲ್ಲಿರಿಸಿಕೊಂಡು ಮನೆಗೆ ಬಂದಿದ್ದಾನೆ. ಸ್ವಲ್ಪ ಸಮಯದ ನಂತರ ಸ್ಕೂಟರ್ ಡಿಕ್ಕಿಯಲ್ಲಿರುವ ಬಾಟಲಿ ತೆಗೆದುಕೊಳ್ಳಲು ಹೋಗಿದ್ದಾನೆ. ಆದರೆ ಕೀ ಸಿಕ್ಕಿಲ್ಲ. ಸೀಟ್ ಲಾಕ್ ತೆಗೆಯಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ.

ಲಾಕ್‌ಡೌನ್ ವೇಳೆ ಕಷ್ಟಪಟ್ಟು ಮದ್ಯ ತಂದರೂ ಕುಡಿಯಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಚಡಪಡಿಕೆ ಹೆಚ್ಚಾಗಿದೆ. ನಂತರ ಸೀಟನ್ನೇ ಜಜ್ಜಿ ಒಡೆದು ಡಿಕ್ಕಿಯಲ್ಲಿ ಕಿಂಡಿ ಮಾಡಿ ಬಾಟಲಿಯ ಮುಚ್ಚಳ ಬೀಳಿಸಿ ಸ್ಟ್ರಾ ತೂರಿಸಿ ಕುಡಿದು ಸಂಭ್ರಮಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net