ವೀಳ್ಯದೆಲೆಯನ್ನು ತಿನ್ನುವುದಕ್ಕಿಂತ ದೇವರ ಪೂಜೆಗೆ ಬಳಸುವವರೇ ಹೆಚ್ಚು. ಆದರೆ, ವೀಳ್ಯದೆಲೆಯಲ್ಲಿ ಹಲವಾರು ಆರೋಗ್ಯಕಾರ ಲಾಭಗಳಿವೆ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ. ಇದು ಕೇವಲ ಪೂಜೆಯಲ್ಲಿ ಬಳಸುವ ವಸ್ತುವಲ್ಲ, ಇದನ್ನು ಸರಿಯಾಗಿ ಬಳಸಿದರೆ ದೇಹದ ತೂಕವನ್ನು ಸುಲಭವಾಗಿ ಇಳಿಸಬಹುದು. ತೂಕ ಮಾತ್ರವಲ್ಲದೆ, ಶುಗರ್, ಬಿಪಿ ಹಾಗೂ ಕೊಬ್ಬನ್ನು ಕರಗಿಸಬಹುದು. ಅಷ್ಟೇ ಏಕೆ ಮಲಬದ್ಧತೆ ಕೂಡ ದೂರ ಆಗುತ್ತದೆ.
ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕೆರೋಟಿನ್ ಮತ್ತು ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳಿವೆ. ವೀಳ್ಯದೆಲೆಯನ್ನು ಜಗಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, ವೀಳ್ಯದೆಲೆ ಕುದಿಸಿದ ನೀರನ್ನು ಕುಡಿಯುವುದು ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.
ತಯಾರಿಸುವುದು ಹೇಗೆ?
ಮೊದಲು ಒಲೆಯ ಮೇಲೆ ಒಂದು ಬಟ್ಟಲನ್ನು ಇಟ್ಟು ಅದರಲ್ಲಿ ಒಂದು ಲೋಟ ನೀರು ಹಾಕಿ, ವೀಳ್ಯದೆಲೆಯನ್ನು ತುಂಡು ಮಾಡಿ, ಅದರೊಳಗೆ ಹಾಕಿ. ಬಳಿಕ 5 ರಿಂದ 7 ನಿಮಿಷಗಳ ಕಾಲ ನೀರನ್ನು ಚೆನ್ನಾಗಿ ಕುದಿಸಿ ಮತ್ತು ನೀರನ್ನು ಆರಿಸಿದ ನಂತರ ಕುಡಿಯಿರಿ.
ಆರೋಗ್ಯ ಲಾಭಗಳೇನು?
* ಮಲಬದ್ಧತೆ ಸಮಸ್ಯೆ ಇರುವವರಿಗೆ ಈ ವೀಳ್ಯದೆಲೆ ನೀರು ತುಂಬಾ ಉಪಯುಕ್ತ. ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.
* ವೀಳ್ಯದೆಲೆಯಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ. ಎದೆಯಲ್ಲಿ ಸಂಗ್ರಹವಾದ ಕಫವನ್ನು ತೆಗೆದುಹಾಕುತ್ತದೆ. ಅಲ್ಲದೆ, ಶೀತ, ಕೆಮ್ಮು ಮತ್ತು ಗಂಟಲು ನೋವನ್ನು ಸಹ ನಿವಾರಿಸುತ್ತದೆ.
* ವೀಳ್ಯದೆಲೆಯ ನೀರು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ಮಧುಮೇಹದ ತೊಡಕುಗಳನ್ನು ಸಹ ಕಡಿಮೆ ಮಾಡುತ್ತದೆ.
* ವೀಳ್ಯದೆಲೆಯ ನೀರು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ವೀಳ್ಯದೆಲೆಯು ಅದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳೊಂದಿಗೆ ಅಸ್ತಮಾವನ್ನು ನಿಯಂತ್ರಣದಲ್ಲಿಡುತ್ತದೆ.
* ವೀಳ್ಯದೆಲೆಯನ್ನು ಮೌತ್ ಫ್ರೆಶ್ನರ್ ಆಗಿಯೂ ಬಳಸಲಾಗುತ್ತದೆ. ಇದು ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ. ವೀಳ್ಯದೆಲೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಬೆಳಗ್ಗೆ ಎದ್ದಾಗ ನಿಮ್ಮ ಮೂತ್ರದ ಬಣ್ಣ ಹೀಗಿದ್ದರೆ ಆರೋಗ್ಯಕ್ಕೆ ಡೇಂಜರ್! ಇಲ್ಲಿದೆ ಉಪಯುಕ್ತ ಮಾಹಿತಿ…