ಮದ್ಯ ಕುಡಿದ ಬಳಿಕ ವಿಪರೀತ ಹೊಟ್ಟೆ ಹಸಿಯುವುದೇಕೆ? ಇಲ್ಲಿದೆ ನೋಡಿ ವಿವರವಾದ ಉತ್ತರ | Drinking Alcohol

ವಿಜಯವಾಣಿ - 2025-09-26T160244.516
Published on

Drinking Alcohol: ಧೂಮಪಾನ, ಮದ್ಯಪಾನ ಮಾಡುವುದು ವಿದೇಶಿ ನೆಲೆಗಳಲ್ಲಿ ನೀರು ಕುಡಿದಂತೆ! ನಮ್ಮ ದೇಶದಲ್ಲಿಯೂ ಇದೊಂದು ಅಭ್ಯಾಸವಾಗಿ ಮಾರ್ಪಟ್ಟಿದೆ. ಆದರೆ, ನಮ್ಮಲ್ಲಿ ಖುಷಿ ಸಂಭ್ರಮಿಸಲು, ದುಃಖ ತೋಡಿಕೊಳ್ಳಲು, ಕಚೇರಿಯಿಂದ ಆಯೋಜಿಸಿದ ಪಾರ್ಟಿ ಅಥವಾ ಸ್ನೇಹಿತರೊಡನೆ ವ್ಯವಹರಿಸುವುದಕ್ಕೆ ಸೇರಿ ಕೆಲವು ಸಂದರ್ಭಗಳಲ್ಲಿ ಕುಡಿಯುವುದು ತೀರ ಸಾಮಾನ್ಯ. ಅಷ್ಟಕ್ಕೂ ಕುಡಿದ ಬಳಿಕ ವಿಪರೀತ ಹೊಟ್ಟೆ ಹಸಿವಾಗುವುದು ಏಕೆ? ಎಂಬ ಪ್ರಶ್ನೆ ಕುಡಿದವರನ್ನು ಆಗಾಗ್ಗೆ ಕಾಡುತ್ತಿರುತ್ತದೆ? ಈ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.

ಅಸಲಿಗೆ ಆಲ್ಕೋಹಾಲ್ ಹಸಿವನ್ನು ಹೆಚ್ಚಿಸುತ್ತದೆ. ಏಕೆಂದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿತಗೊಳಿಸುತ್ತದೆ. ಮದ್ಯವು ನಿಮ್ಮ ಮಿದುಳನ್ನು ಹಸಿವಿನ ಬಾಗಿಲನ್ನು ಬಡಿಯುವಂತೆ ಮಾಡುತ್ತದೆ. ಕುಡಿತದಿಂದ ಮಿದುಳಿನ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಹೀಗಾಗಿ, ಏನಾದರೂ ತಿನ್ನಬೇಕು ಅನಿಸುತ್ತದೆ. ಲಘು ಆಹಾರ ಸವಿದರೂ ಭಾರೀ ಪ್ರಮಾಣದಲ್ಲಿ ಸೇವಿಸಬೇಕು ಎಂಬ ಬಯಕೆ ಮೂಡುತ್ತದೆ. 2017ರ ಸಂಶೋಧನೆಯಲ್ಲಿ, ಮದ್ಯವು ಹಸಿವನ್ನು ಸೂಚಿಸುವ ಕೆಲವು ನರಕೋಶಗಳನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು ತೋರಿಸಿದೆ.

ಹಸಿವಿಗೆ ಮದ್ಯ ಹೇಗೆಲ್ಲ ಕಾರಣ?

ಮಿದುಳಿನ ಮೇಲೆ ಪರಿಣಾಮ: ಹಸಿವು ಸೇರಿದಂತೆ ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಮಿದುಳಿನ ಭಾಗವಾದ ಹೈಪೋಥಾಲಮಸ್ ಮೇಲೆ ಮದ್ಯವು ಪರಿಣಾಮ ಬೀರುತ್ತದೆ. 2017ರ ಸಂಶೋಧನೆಯು ಆಲ್ಕೋಹಾಲ್ ಹಸಿವನ್ನು ಸೂಚಿಸುವ ಕೆಲವು ನರಕೋಶಗಳನ್ನು (AgRP ನರಕೋಶಗಳು) ಸಕ್ರಿಯಗೊಳಿಸುತ್ತದೆ ಎಂದು ತೋರಿಸಿದೆ. ಇದು ನಿಮಗೆ ಏನಾದರೂ ತಿನ್ನುವಂತೆ ಹೇಳುತ್ತದೆ.

ರುಚಿ ಹೆಚ್ಚಳ, ವಾಸನೆಯ ಸಂವೇದನೆ: ಮದ್ಯವು, ನೀವು ತಿನ್ನುವ ಆಹಾರ ರುಚಿ ಮತ್ತು ವಾಸನೆಯನ್ನು ದ್ವಿಗುಣಗೊಳಿಸುತ್ತದೆ. ಕುಡಿತಕ್ಕೂ ಮುನ್ನ ಇಲ್ಲದ ರುಚಿ, ಘಮಲು ಕುಡಿದ ಬಳಿಕ ಹೆಚ್ಚುತ್ತದೆ. ಈ ವರ್ಧಿತ ಸಂವೇದನಾ ಗ್ರಹಿಕೆಗೆ ಹೈಪೋಥಾಲಮಸ್ ಕೂಡ ಒಂದು ಬಲವಾದ ಕಾರಣ.

ರಕ್ತದಲ್ಲಿನ ಸಕ್ಕರೆ ಅಂಶ ಇಳಿಕೆ: ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕುಸಿಯುವಂತೆ ಮಾಡುತ್ತದೆ. ಇದು ಆಯಾಸಕ್ಕೂ ಕಾರಣವಾಗಬಹುದು. ಮಿದುಳು ಹಸಿವನ್ನು ಸೂಚಿಸುವ ಮೂಲಕ ಸರಿದೂಗಿಸುತ್ತದೆ. ಹೆಚ್ಚಾಗಿ ಸಿಹಿ ಅಥವಾ ಉಪ್ಪು ಆಹಾರಕ್ಕಾಗಿ ಮಿದುಳು ಹುಡುಕಾಡುತ್ತದೆ.

ನಿಯಂತ್ರಣ ಕಳೆದುಕೊಳ್ಳುವಿಕೆ: ಕುಡಿತದಿಂದ ನಾವು ತೆಗೆದುಕೊಳ್ಳುವ ನಿರ್ಧಾರ ಮತ್ತು ನಮ್ಮ ಮೇಲೆ ನಮಗಿರಬೇಕಾದ ಕಂಟ್ರೋಲ್​ ತಪ್ಪುತ್ತದೆ. ಆರೋಗ್ಯಕರ ಆಯ್ಕೆಗಳಿಗಿಂತ ಹೆಚ್ಚಿನ ಕ್ಯಾಲೋರಿ ಆಹಾರಗಳೇ ಬೇಕು ಅನಿಸುತ್ತದೆ. ಕರಿದ ಅಥವಾ ಜಂಕ್ ಫುಡ್​ ಬೇಡ ಎಂದು ಹೇಳುವುದು ಕೊಂಚ ಕಷ್ಟಕರವೇ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net