

ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಉತ್ತಮ ನಿರ್ವಹಣೆ ತೋರುವುದಷ್ಟೇ ನನ್ನ ಗುರಿ. ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ನನ್ನ ಕನಸು ಜೀವಂತವಾಗಿದೆ ಎಂದು ಕರ್ನಾಟಕದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಉತ್ತಪ್ಪ ಪ್ರಸಕ್ತ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಪ್ರತಿನಿಧಿಸಲಿದ್ದಾರೆ. ಸೆ.19 ರಿಂದ ನ.10ರವರೆಗೆ ಐಪಿಎಲ್ ಯುಎಇಯ 3 ನಗರಗಳಲ್ಲಿ ನಡೆಯಲಿದೆ. ರಾಜಸ್ಥಾನ ರಾಯಲ್ಸ್ ತಂಡದ ವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಉತ್ತಪ್ಪ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಉತ್ತಮ ನಿರ್ವಹಣೆ ತೋರಿದರೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವಿದೆಯೇ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಉತ್ತಪ್ಪ, ಐಪಿಎಲ್ನಲ್ಲಿ ಉತ್ತಮ ನಿರ್ವಹಣೆ ತೋರಬೇಕು ಎಂಬುದೇ ನನ್ನ ಉದ್ದೇಶ. ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂಬ ನನ್ನ ಕನಸು ಈಗಲೂ ಜೀವಂತವಾಗಿದೆ. ಈ ಕುರಿತು ಸಕರಾತ್ಮಕವಾಗಿಯೇ ಯೋಚಿಸುತ್ತಿದ್ದೇನೆ ಎಂದರು. ದೇವರ ಆಶೀರ್ವಾದಿಂದಾಗಿ ರಾಷ್ಟ್ರೀಯ ತಂಡ ಪ್ರತನಿಧಿಸಿದೆ. ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಆಡುವವರು ಉತ್ತಮ ನಿರ್ವಹಣೆ ತೋರಿದರೆ, ರಾಷ್ಟ್ರೀಯ ತಂಡ ಪ್ರತಿನಿಧಿಸುವ ಅವಕಾಶ ಹೊಂದಿರುತ್ತಾರೆ ಎಂದರು. ರಾಬಿನ್ ಉತ್ತಪ್ಪ 2015ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು.
ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡದ ಪರ 46 ಏಕದಿನ ಪಂದ್ಯಗಳಿಂದ 934 ರನ್ ಗಳಿಸಿದರೆ, 13 ಟಿ20 ಪಂದ್ಯಗಳಿಂದ 249 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕ, ಸೌರಾಷ್ಟ್ರ ಹಾಗೂ ಕೇರಳ ತಂಡ ಪ್ರತಿನಿಧಿಸಿದ್ದಾರೆ. 2013&14, 2014&15ನೇ ಸಾಲಿನಲ್ಲಿ ಕರ್ನಾಟಕ ಜಯಿಸಿದ ಹ್ಯಾಟ್ರಿಕ್ (ರಣಜಿ, ಇರಾನಿ, ವಿಜಯ್ ಹಜಾರೆ) ಪ್ರಶಸ್ತಿ ವಿಜೇತ ತಂಡದ ಸದಸ್ಯರಾಗಿದ್ದರು.