VIDEO: ಒಂದೇ ಕೈಯಲ್ಲಿ ಸಿಕ್ಸರ್​ ಸಿಡಿಸಿದ ವಿಂಡೀಸ್​ ದೈತ್ಯ ಕೈರಾನ್​ ಪೊಲ್ಲಾರ್ಡ್​..!

pollard one hand six for web
Published on

ತರೌಬ: ಚುಟುಕು ಕ್ರಿಕೆಟ್​ಗೂ ವೆಸ್ಟ್​ ಇಂಡೀಸ್​ ಆಟಗಾರರಿಗೂ ಅವಿನಾಭಾವ ಸಂಬಂಧ. ಟಿ20 ಲೀಗ್​ಗಳಲ್ಲಿ ಅವರದ್ದೇ ಪ್ರಭುತ್ವ. ಬಹುತೇಕ ದಾಖಲೆಗಳ ಒಡೆಯರಾಗಿದ್ದಾರೆ ವಿಂಡೀಸ್​ ಆಟಗಾರರು. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವಿಂಡೀಸ್​ ಆಟಗಾರರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಚುಟುಕು ಕ್ರಿಕೆಟ್​ನಲ್ಲಿ ಎಂದಿಗೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ವಿಂಡೀಸ್​ ಆಟಗಾರರು. ಅವರಲ್ಲಿ ಆಲ್ರೌಂಡರ್​ ಕೈರಾನ್​ ಪೊಲ್ಲಾರ್ಡ್​ ಕೂಡ ಪ್ರಮುಖರು. ಕೆರಿಬಿಯನ್​ನಲ್ಲೇ ನಡೆಯುತ್ತಿರುವ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಕೈರಾನ್​ ಪೊಲ್ಲಾರ್ಡ್​ ಒಂದೇ ಕೈಯಲ್ಲಿ ಸಿಕ್ಸರ್​ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್​ ರೈಡರ್ಸ್​ (ಟಿಕೆಆರ್​) ತಂಡದ ನಾಯಕನಾಗಿರುವ ಪೊಲ್ಲಾರ್ಡ್​ ಒಂದೇ ಕೈಯಲ್ಲಿ ಸಿಕ್ಸರ್​ ಸಿಡಿಸಿದರು.

ಟಿಕೆಆರ್​ ತಂಡದ ನಾಯಕ ಎದುರಿಸಿದ ಕೇವಲ 17 ಎಸೆತಗಳಲ್ಲಿ 41 ರನ್​ ಸಿಡಿಸಿ ಗಮನಸೆಳೆದರು. ಡರೇನ್​ ಬ್ರಾವೊ (54ರನ್​, 36 ಎಸೆತ, 4 ಬೌಂಡರಿ, 4 ಸಿಕ್ಸರ್​), ಕಾಲಿನ್​ ಮುನ್ರೊ (50ರನ್​, 30 ಎಸೆತ, 7 ಬೌಂಡರಿ, 2 ಸಿಕ್ಸರ್​) ಹಾಗೂ ನಾಯಕ ಕೈರಾನ್​ ಪೊಲ್ಲಾರ್ಡ್​ ತ್ರಿಮೂತಿರ್ಗಳ ಅಬ್ಬರದ ಫಲವಾಗಿ ಟಿಕೆಆರ್​ ತಂಡ 19 ರನ್​ಗಳಿಂದ ಬಾರ್ಬಡೊಸ್​ ಟ್ರಿಡೆಂಟ್ಸ್​ ತಂಡವನ್ನು ಮಣಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ದಿನದ ಮತ್ತೊಂದು ಪಂದ್ಯದಲ್ಲಿ ಸೇಂಟ್​ ಲೂಸಿಯಾ ಜೌಕ್ಸ್​ ತಂಡ 10 ರನ್​ಗಳಿಂದ ಗಯಾನ ಅಮೆಜಾನ್​ ವಾರಿಯರ್ಸ್​ ತಂಡವನ್ನು ಮಣಿಸಿ ಲೀಗ್​ನಲ್ಲಿ 3ನೇ ಜಯ ದಾಖಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net