ದ್ರಾವಿಡ್​ ಕಾರಿಗೆ ಆಟೋ ಡಿಕ್ಕಿ; ಚಾಲಕನ ಜತೆ ವಾಗ್ವಾದಕ್ಕಿಳಿದ ರಾಹುಲ್​! | Dravid

dk (77) (1)
Published on

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಆಟಗಾರ ರಾಹುಲ್​ ದ್ರಾವಿಡ್(Dravid)​ ಕಾರಿಗೆ ಗೂಡ್ಸ್​ ಆಟೋವೊಂದು ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಕನ್ನಿಂಗ್​ ಹ್ಯಾಮ್​ ರಸ್ತೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಈ ಹಿನ್ನೆಲೆ ಗೂಡ್ಸ್​ ಆಟೋದ ಡಿಕ್ಕಿ ಆಗಿದ್ದರಿಂದ ಕಾರಿನಿಂದ ಹೊರಬಂದ ಡ್ರಾವಿಡ್​ ತಮ್ಮ ಕಾರ್​ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಟೋ ಚಾಲಕನ ಜತೆ ದ್ರಾವಿಡ್​ ಸಣ್ಣದಾಗಿ ವಾಗ್ವಾದ ಮಾಡಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಹೈಗ್ರೌಂಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ಈ ಕುರಿತು ಯಾವುದೇ ಪ್ರಕರಂಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.

ತುಂಬಾ ಟ್ರಾಫಿಕ್​​ ವೇಳೆ ಘಟನೆ ನಡೆದಿದ್ದು, ಡ್ರಾವಿಡ್​ ಅವರದ್ದು ತಪ್ಪೋ ಅಥವಾ ಆಟೋ ಚಾಲಕನದ್ದು ತಪ್ಪೋ ಎಂಬುವುದು ಸ್ಪಷ್ಟತೆ ಇಲ್ಲ. ಕೆಳಗಿಳಿದು ಕಾರ್ ಪರಿಶೀಲಿಸಿದ ನಂತರ ದ್ರಾವಿಡ್​ ಆಟೋ ಚಾಲಕನ ಫೋನ್​ ನಂ ಪಡೆದು ತೆರಳಿದ್ದಾರೆ ಎನ್ನಲಾಗಿದೆ.

#INDVsEngODI #BigShock #

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net