ರಂಗ ವೇದಿಕೆಯಲ್ಲೇ ಹೃದಯಾಘಾತ; ನಾಟಕ ಮಾಡುತ್ತಿದ್ದಾಗಲೇ ಪ್ರಾಣ ಬಿಟ್ಟ ಮತ್ತೊಬ್ಬ ಕಲಾವಿದ

ಕಲಾವಿದ
Published on

ಮಂಡ್ಯ: ನಾಟಕ ಪ್ರದರ್ಶನದ ವೇಳೆ ರಂಗ ವೇದಿಕೆಯಲ್ಲಿ ನಟನೆ ಮಾಡುತ್ತಿರುವಾಗಲೇ ಪಾತ್ರಧಾರಿ ಪ್ರಾಣ ಬಿಟ್ಟಿರುವಂತಹ ಘಟನೆ ಮಳವಳ್ಳಿ ತಾಲೂಕಿನ ಬಂಡೂರು ಬಸವನಗುಡಿ ಸಮೀಪ ನಡೆದಿದೆ. ದುಗ್ಗನಹಳ್ಳಿ ಗ್ರಾಮದ ಡಿ.ಎನ್.ನಂಜಯ್ಯ ಮೃತ ಕಲಾವಿದ.

ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿಕೊಂಡು ಪೌರಾಣಿಕ ನಾಟಕ ಆಯೋಜಿಸಿದ್ದರು. ಡ್ರಾಮಾ‌ಸೀನ್ಸ್ ಸೆಟ್​​ನಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕದಲ್ಲಿ ಸೈಂಧವ ಮತ್ತು ಸಾರ್ಥಕಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿ ನಟನೆ ಮಾಡುವ ವೇಳೆ ವೇದಿಕೆಯಲ್ಲೇ ಹೃದಯಾಘಾತ ಸಂಭವಿಸಿದೆ.

ಕೂಡಲೇ ಅಲ್ಲಿದ್ದ ಜನರು ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತೆ ಕರೆತಂದು ಚಿಕಿತ್ಸೆ ದಾಖಲಿಸಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಕಲಾವಿದ ವೇದಿಕೆಯಲ್ಲೇ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ದಾರೆ. ಇದೀಗ ಕಲಾವಿದ ನಂಜಯ್ಯ ಅವರಿಗೆ ವೇದಿಕೆಯಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವ ವಿಡಿಯೋ ಸೆರೆಯಾಗಿದೆ. ಪತಿಯ ಸಾವಿನ ಕೊನೆ ಕ್ಷಣವನ್ನು ಕಂಡ ಪತ್ನಿ, ಮಗಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net