

ಬೆಂಗಳೂರು : ಡಾ.ಕಾ.ವೆಂ.ಶ್ರೀನಿವಾಸಮೂರ್ತಿಯವರು ‘ಈವರೆಗಿನ ಭಾವಗೀತೆಗಳು ಒಂದು ಅಧ್ಯಯನ’ ಎಂಬ ವಿಷಯದ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಡಿ.ಲಿಟ್ ಪದವಿ ಘೋಷಿಸಿದೆ.
ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಸಲ್ಲಿಸಿದ್ದ ಮಹಾಪ್ರಬಂಧವನ್ನು ತಜ್ಞರ ಸಮಿತಿ ಮೌಲ್ಯಮಾಪನಕ್ಕೊಳಪಡಿಸಿ ನಂತರ ನಡೆದ ಮೌಖಿಕ ಸಂದರ್ಶನದಲ್ಲಿ ಸಂಶೋಧಕರು ತಮ್ಮ ಪ್ರಬಂಧವನ್ನು ಸಮರ್ಥಿಸಿಕೊಂಡ ನಂತರ ಡಿ.ಲಿಟ್ ಪದವಿಯನ್ನು ಕುಲಪತಿಗಳು ಘೋಷಿಸಿದ್ದಾರೆ.