ನ.24ಕ್ಕೆ ಸದ್ಗುರು ಶ್ರೀಮುತ್ತುಸ್ವಾಮಿ ದೀಕ್ಷಿತರ ಆರಾಧನೆ; ಕನಕದಾಸರ ಜಯಂತಿ

anugraha
Published on

ಬೆಂಗಳೂರು: ಶ್ರೀಅನುಗ್ರಹ ಸಂಗೀತ ಮಹಾವಿದ್ಯಾಲಯವು ನ.24ರಂದು ಬನಶಂಕರಿ 1ನೇ ಹಂತದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿ ಸಂಗೀತ ಪರಮಹಂಸ ಸದ್ಗುರು ಶ್ರೀಮುತ್ತುಸ್ವಾಮಿ ದೀಕ್ಷಿತರ ಆರಾಧನಾ ಮಹೋತ್ಸವ ಮತ್ತು ಸಂತಕವಿ ಕನಕದಾಸರ ಜಯಂತಿ ನಿಮಿತ್ತ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.

ಮಧ್ಯಾಹ್ನ 3.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸುಧಾಮಣಿ, ವಿದ್ವಾನ್ ಜೆ.ಎಸ್ . ಶ್ರೀಕಂಠ ಭಟ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಮುತ್ತುಸ್ವಾಮಿ ದೀಕ್ಷಿತರ ಪಾಶ್ಚಾತ್ಯ ಸಂಗೀತ ಸಂಯೋಜನೆಗಳನ್ನು ಆಧರಿಸಿದ ನೊಟ್ಟುಸ್ವರ ಸಾಹಿತ್ಯ ಗೋಷ್ಠಿ ಹಮ್ಮಿಕೊಳ್ಳಲಾಗಿದೆ . 15 ವೀಣಾ ಕಲಾವಿದರು ಏಕಕಾಲದಲ್ಲಿ ವೀಣೆ ನುಡಿಸಲಿದ್ದಾರೆ.

ವಿದ್ಯಾಲಯವು ಆಯೋಜಿಸಿದ್ದ ವಿಶೇಷ ಶಿಬಿರದಲ್ಲಿ ದಾಸರಪದಗಳನ್ನು ಕಲಿತ ಶಿಬಿರಾರ್ಥಿಗಳು ಮತ್ತು ವಿದ್ಯಾರ್ಥಿಗಳಿಂದ ಕನಕದಾಸರ ದೇವರನಾಮಗಳ ಗಾಯನ ನಡೆಯಲಿದೆ. ಸಂಜೆ ವಿದ್ವಾನ್ ಸುಬ್ಬಕೃಷ್ಣ ಮತ್ತು ವಿದ್ವಾನ್ ನಿರಂಜನ ಯಡಿಯಾಳರಿಂದ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಆಧರಿಸಿದ ವಿಶೇಷ ಸಂಗೀತ ಕಚೇರಿ ಹಾಗೂ ಕೊಳಲುವಾದನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net