ಬೆಂಗಳೂರು: ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಸೇನಾ ಸಮಿತಿಯು ಹೊರತಂದಿರುವ 2021ನೇ ಸಾಲಿನ ಹೊಸ ಕ್ಯಾಲೆಂಡರ್‌ನ್ನು ಹಿರಿಯ ನಟ ದೇವರಾಜ್ ಬಿಡುಗಡೆ ಮಾಡಿದ್ದಾರೆ. ಸೇನಾ ಸಮಿತಿಯು ಕಳೆದ ಕೆಲವು ವರ್ಷಗಳಿಂದ ಡಾ. ರಾಜಕುಮಾರ್ ಅವರ ಕುಟುಂಬದವರ ಕ್ಯಾಲೆಂಡರ್ ಹೊರತರುವ ಪರಿಪಾಠವಿಟ್ಟುಕೊಂಡಿದ್ದು, ಈ ವರ್ಷ ಸಹ ಡಾ. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಅಪರೂಪದ ಭಾವಚಿತ್ರಗಳಿರುವ ಕ್ಯಾಲೆಂಡರ್ ಹೊರತಂದಿದೆ.
ಈ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ದೇವರಾಜ್, ‘ಈ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು ಪುಣ್ಯದ ಕೆಲಸ. ಈ ಕ್ಯಾಲೆಂಡರ್‌ನಲ್ಲಿ ಕೃಷ್ಣನ ಅವತಾರದಲ್ಲಿರುವ ಡಾ. ರಾಜಕುಮಾರ್ ಅವರ ಭಾವಚಿತ್ರವು ಬಹಳ ಸೊಗಸಾಗಿ ಮೂಡಿಬಂದಿದೆ. ಇದೇ ರೀತಿ ಪ್ರತಿ ವರ್ಷವೂ ಕ್ಯಾಲೆಂಡರ್ ಹೊರಬರಲಿ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಸೇನಾ ಸಮಿತಿಯ ಅಧ್ಯಕ್ಷ ನಾರಾಯಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.