

ಇಂಗ್ಲೆಂಡ್: ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಆದ ಡಾ. ನೀರಜ್ ಪಾಟೀಲ್(Neeraj Patil) ದಂಪತಿಗಳು ಬ್ರಿಟನ್ ಸಂಸತ್ನಲ್ಲಿ ಪಿಎಂ ಕೀರ್ ಸ್ಟಾರ್ಮರ್ ಜತೆ ಬುಧವಾರ ದೀಪಾವಳಿ ಆಚರಿಸಿದರು.
ಎಂಟು ವರ್ಷಗಳ ಕಾಲ ಲ್ಯಾಂಬೆತ್ ಕೌನ್ಸಿಲ್‌ನಲ್ಲಿ ಸೇವೆ ಸಲ್ಲಿಸಿರುವ ಡಾ. ನೀರಜ್ ಪಾಟೀಲ್, 2015ರಲ್ಲಿ ಬ್ರಿಟಿಷ್ ಸಂಸತ್ತಿನ ಎದುರು ಬಸವೇಶ್ವರ ಪ್ರತಿಮೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರತಿಮೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಅನಾವರಣಗೊಳಿಸಿದ್ದರು.