More

    ಸಾಯಿ ಪಲ್ಲವಿ ದತ್ತು ಪುತ್ರಿನಾ? ಅವರ ನಿಜವಾದ ತಂದೆ-ತಾಯಿ ಯಾರೆಂಬ ರಹಸ್ಯ ಬಿಚ್ಚಿಟ್ಟ ಸ್ಟಾರ್ ಬ್ಯೂಟಿ!

    ಚೆನ್ನೈ: ಸಾಯಿ ಪಲ್ಲವಿ 2015 ರಲ್ಲಿ ಮಲಯಾಳಂ ಚಿತ್ರ ಪ್ರೇಮಂ ಮೂಲಕ ಸಿನಿರಂಗಕ್ಕೆ ಮೊದಲ ಬಾರಿ ಕಾಲಿಟ್ಟರು. ಫಿದಾ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಮೂಲಕ ಸಾಯಿ ಪಲ್ಲವಿ ಸೂಪರ್ ಹಿಟ್ ಆಗಿದ್ದು ಎಂದರೆ ತಪ್ಪಾಗಲ್ಲ.

    ಇನ್ನು ಇವರೆಲ್ಲರಿಗಿಂತ ಸಾಯಿ ಪಲ್ಲವಿ ವಿಭಿನ್ನ ನಾಯಕಿಯಂತೆ ಕಾಣಿಸಿಕೊಳ್ಳುತ್ತಾರೆ. ಸಾಯಿ ಪಲ್ಲವಿ ಯಾವುದೇ ರೀತಿಯ ಎಕ್ಸ್​ಪೋಸಿಂಗ್​ ಸೀನ್​ಗಳನ್ನು ಮಾಡದೇ ಅತಿ ಹೆಚ್ಚು ಆಫರ್​ಗಳನ್ನು ಪಡೆಯುತ್ತಿರುವ ನಟಿ. ಇನ್ನು ಬಾಲ್ಯದ ಬಗ್ಗೆ ಸಾಯಿ ಪಲ್ಲವಿ ಆಡಿದ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

    ಇತ್ತೀಚೆಗಷ್ಟೇ ಈ ನ್ಯಾಚುರಲ್ ಬ್ಯೂಟಿ ಸಂದರ್ಶನವೊಂದರಲ್ಲಿ ತನ್ನ ಬಾಲ್ಯದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಅವರ ತಂದೆ-ತಾಯಿ ಬಳಿ ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ. ಅದರಲ್ಲಿ ಅವರನ್ನು ದತ್ತು ತೆಗೆದುಕೊಂಡಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದರಂತೆ. ನಾನು ತುಂಬಾ ಬೆಳ್ಳಗಿದ್ದೇನೆ, ಫೇರ್ ಆಗಿದ್ದೇನೆ. ನಿನಗೇಕೆ ಡಸ್ಕಿ ಸ್ಕಿನ್ ಕಲರ್ ಇದೆ. ನನ್ನನ್ನು ದತ್ತು ತೆಗೆದುಕೊಂಡಿದ್ದೀರಾ ಎಂದು ತಂದೆ-ತಾಯಿಯನ್ನು ನೇರವಾಗೇ ಪ್ರಶ್ನಿಸುತ್ತಿದ್ರಂತೆ. ಕೊನೆಗೆ ಪೋಷಕರು ಸಾಯಿ ಪಲ್ಲವಿಗೆ ಮನವರಿಕೆ ಮಾಡಿದ್ದಾರೆ. “ನೀನು ನಿನ್ನ ತಂಗಿ ಇಬ್ಬರೂ ನಮ್ಮ ಮಕ್ಕಳೇ” ಎಂದು ಹೇಳುತ್ತಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

    ಸಾಯಿ ಪಲ್ಲವಿ ಮತ್ತು ನಟಿ ಪೂಜಾ ಕಣ್ಣನ್, ಸೆಂತಾಮರೈ ಕಣ್ಣನ್ ಮತ್ತು ರಾಧಾ ಅವರ ಮಕ್ಕಳಾಗಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮೂಲದವರಾಗಿದ್ದಾರೆ. ಸಾಯಿ ಪಲ್ಲವಿ ವೈದ್ಯಕೀಯ ಶಿಕ್ಷಣ ಪಡೆಯುತ್ತಲೇ ಚಿತ್ರರಂಗ ಪ್ರವೇಶಿಸಿದ್ರು. ಸದ್ಯ ಡಾಕ್ಟರ್ ಸಾಯಿ ಪಲ್ಲವಿ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ.

    ಸದ್ಯ ಸಾಯಿ ಪಲ್ಲವಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ತಾನು ಅಂದುಕೊಂಡಿದ್ದಕ್ಕಿಂತ ಅತೀ ಹೆಚ್ಚು ಸಿನಿಮಾ ಆಫರ್​ಗಳು ಅವರ ಪಾಲಿಗೆ ಬರುತ್ತಿವೆ.

    ‘ಯೋಗ್ಯತೆ ಇದ್ರೆ ನನ್ನೆ ಎದೆಗೆ ಒದ್ದು ನೋಡು’; ಬಿಗ್​ಬಾಸ್​ ಮನೆಯಲ್ಲಿ ಹೊಸ ವರ್ಷಕ್ಕೆ ಹೊಸ ಲೆಕ್ಕಾಚಾರ

    BBKS10: ಸಿರಿ ಪ್ರಕಾರ ಸೀಸನ್​ 10ರ ವಿನ್ನರ್​ ಇವರೇ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts