

ಬೆಂಗಳೂರು: ಇನ್ನೇನು ಬಿಗ್ ಬಾಸ್ ಕನ್ನಡ 10 ಮುಗುತ್ತಿದೆ. ದಿನ ಕಳೆದಂತೆ ಸ್ಪರ್ಧಿಗಳಲ್ಲಿ ಗೆಲ್ಲುವ ಕಿಚ್ಚು ಹೆಚ್ಚಾಗ್ತಿದೆ. ಈ ಬಾರಿ ಮಹಿಳೆ ವಿನ್ನರ್ ಆಗ್ತಾರಾ? ಎನ್ನುವ ನಿರೀಕ್ಷೆ ಹೆಚ್ಚಿನ ಜನರಲ್ಲಿ ಕಾಡುತ್ತಿದೆ. ಇನ್ನು ಈ ವಾರ ಬಿಗ್ ಬಾಸ್ ನೀಡಿರುವ ಹೊಸ ಆಟದ ಪ್ರೋಮೋವನ್ನ ಕಲರ್ಸ್ ಕನ್ನಡ ವಾಹಿನಿ ಹೊರ ಬಿಟ್ಟಿದೆ.
ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರದ ಆಟ ಶುರುವಾಗಿದೆ. ಇಷ್ಟು ದಿನ ಒಂದಾದ್ರೆ ಇನ್ನು ಮುಂದೆ ಇನ್ನೊಂದು ಲೆಕ್ಕ ಅಂತ ಬಿಗ್ ಬಾಸ್ ಸ್ಪರ್ಧಿಗಳು ಅಖಾಡಕ್ಕೆ ಇಳಿದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ದಿನ ಕಳೆದಂತೆ ಕಠಿಣ ಸ್ಪರ್ಧೆ ಶುರುವಾಗ್ತಿದೆ. ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಜನ್ರು ಚರ್ಚೆ ಶುರು ಮಾಡಿದ್ದಾರೆ. ಇದೀಗ ಕಳೆದ 2 ವಾರಗಳಿಂದ ನಡೆದ ಆಟಗಳು ಮಾತ್ರ ಸ್ಪರ್ಧಿಗಳಿಗೆ ನಿದ್ದೆಗೆಡಿಸಿದ್ದಂತಿದೆ. ಪ್ರತಿ ವೀಕೆಂಡ್ನಲ್ಲೂ ಕಿಚ್ಚನ ಚಪ್ಪಾಳೆ ಮಿಸ್ ಆಗುತ್ತಿರುವುದಾರು ಏಕೆ ಎಂಬ ಪ್ರಶ್ನೆ ಸ್ಟರ್ಧಿಗಳಿಗೆ ಕಾಡುತ್ತಿದೆ. ಕಳೆದ ವಾರ ಮನೆಯಿಂದ ಎಲ್ಲರ ಪೇರೆಂಟ್ಸ್ ಬಂದಾಗಿನಿಂದ ಕೆಲವರ ಆಟಕ್ಕೆ ಇನ್ನಷ್ಟು ಬಲ ಸಿಕ್ಕಿದಂತಾಗಿದೆ.
ಇದ್ದಿದ್ದು ಇದ್ದಾಗೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ!: ಬಿಡುಗಡೆಯಾದ ಪ್ರೋಮೋದಲ್ಲಿ ಹೊಸ ವರ್ಷಕ್ಕೆ ಹೊಸ ಲೆಕ್ಕಾಚಾರವೆಂಬಂತೆ ಬಿಗ್ ಬಾಸ್ ಸ್ಪರ್ಧಿಗಳಿಗೆ, ಮೌಲ್ಯ ಇರುವ ಫಲಕಗಳನ್ನ ನೀಡಿ ತಮ್ಮ ಮೌಲ್ಯವನ್ನ ಎಷ್ಟು ಎಂದು ಡಿಮ್ಯಾಂಡ್ ಮಾಡಿ ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಎಲ್ರೂ 20 ಲಕ್ಷ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಸಂಗೀತಾ, ನಾನು ಈ ಮನೆಗೆ ಬಂದು ನನ್ನ ಜರ್ನಿ ಶುರುವಾಗಿದ್ದು ಅಸಮರ್ಥಳಾಗಿ ಎಂದಾಕ್ಷಣ ಪ್ರತಿಯುತ್ತರವಾಗಿ, ವಿನಯ್ ಅಸಮರ್ಥ ಅಂತ ಶುರು ಮಾಡೋದು ಕಾರ್ಡ್ ಪ್ಲೇ ಮಾಡಿದಾಗಿದೆ ಎಂದಿದ್ದಾರೆ. ತನಿಶಾ, ಇದ್ದಿದ್ದು ಇದ್ದಾಗೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಎಂದಿದ್ದಾರೆ. ಇದಕ್ಕೆ ವಿನಯ್, ಯೋಗ್ಯತೆ ಇದ್ರೆ ನನ್ನ ಎದೆಗೆ ಒದ್ದು ನೋಡು ಎಂದು ರೊಚ್ಚಿಗೆದ್ದಿದ್ದಾರೆ.
ಸದ್ಯ, ಬಿಡುಗಡೆಯಾದ ಪ್ರೋಮೋ ವೈರಲ್ ಆಗಿದೆ. ಇನ್ನು ಇವತ್ತಿನ ಎಪಿಸೋಡ್ ತುಂಬಾನೇ ಇನ್ಟ್ರೆಸ್ಟಿಂಗ್ ಆಗಿದ್ದು, ರಾತ್ರಿ 9 ಗಂಟೆವರೆಗೆ ಕಾದು ನೋಡಬೇಕಿದೆ.