More

    ನ್ಯೂ ಇಯರ್​ ಆಚರಣೆಯ ಒಂದೇ ರಾತ್ರಿ ಬೆಂಗಳೂರಲ್ಲಿ ಬರೋಬ್ಬರಿ 8 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ

    ಬೆಂಗಳೂರು:  ನಿನ್ನೆ ಬೆಂಗಳೂರಿನ ಮಂದಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಜ್ಜಾಗಿದ್ದರು. ಅದ್ದೂರಿಯಾಗಿ ಹೊಸ ವರ್ಷವನ್ನು ಬರ ಮಾಡಿಕೊಂಡರು. ಆದರೆ ಹೊಸ ವರ್ಷಾಚರಣೆ ಮುಗಿದಿದ್ದು ಜನರೆಲ್ಲ ತಮ್ಮ ಮನೆ ಸೇರಿದ್ದಾರೆ. ಆದರೆ ಬಿಬಿಎಂಪಿ ಪೌರ ಕಾರ್ಮಿಕರಿಗೆ ದೊಡ್ಡ ತಲೆ ನೋವಾಗಿದೆ.

    ಹೊಸ ವರ್ಷ ಹಿನ್ನೆಲೆ ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಜನ ಹಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಜನ ಮೋಜು, ಮಸ್ತಿ ನಡೆಸಿದ ಸ್ಥಳಗಳು, ಮದ್ಯದ ಬಾಟಲಿ ಮತ್ತು ತಿಂದು ಬಿಟ್ಟ ತಿಂಡಿಗಳು, ಪೇಪರ್-ಪ್ಯಾಕೆಟ್​ಗಳಿಂದ ಗಬ್ಬೆದಿತ್ತು.

    ಬೀದಿಗಳಲ್ಲಿ ಭರ್ಜರಿ ವರ್ಷಾಚರಣೆ ನಡೆದಿದ್ದು ಒಂದೇ ರಾತ್ರಿಗೆ ಬರೋಬ್ಬರಿ 8 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಎಂಜಿ ರೋಡ್, ಬ್ರಿಗೇಡ್‌ ರೋಡ್‌, ಚರ್ಚ್‌ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ಕಂಡು ಬಂದಿದ್ದು 8 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ.

    ನಸುಕಿನ ಜಾವ 3 ಗಂಟೆಯಿಂದ ಬೆಳಿಗ್ಗೆ 8 ಗಂಟೆ ವರೆಗೆ ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಿದರು. 100ಕ್ಕೂ ಅಧಿಕ ಪೌರಕಾರ್ಮಿಕರು ನಗರದ ಬೀದಿಗಳನ್ನು ಗುಡಿಸಿ ಸ್ವಚ್ಚಗೊಳಿಸಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ 2 ಕಾಂಪ್ಯಾಕ್ಟರ್, 25 ಆಟೋ ಟಿಪ್ಪರ್ ಬಳಕೆ ಮಾಡಲಾಗಿದೆ.

    ಈ ವೇಳೆ ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಇನ್ನು ವಿಶೇಷವೆಂದರೆ ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಸಂಸ್ಥಯೊಂದರ ಉದ್ಯೋಗಿಗಳು ಖುದ್ದು ತಾವೇ ಬೀದಿಗಿಳಿದು ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡಿದ್ದಾರೆ.

    ‘2024ಕ್ಕೆ ನಾನು ಅಮ್ಮನಾಗುವೆ’ಎಂದು ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts