ನವದೆಹಲಿ: ವಿವಾದಗಳಿಗೂ ಟೀಮ್ ಇಂಡಿಯಾ (Team India) ಕೋಚ್ ಗೌತಮ್ ಗಂಭೀರ್ಗೆ (Gautam Gambhir) ಎಲ್ಲಿಲ್ಲದ ನಂಟು ಎಂದರೆ ತಪ್ಪಾಗಲಾರದು. ಈ ಹಿಂದೆ ಆಟಗಾರ (Player), ಸಂಸದ (MP), ಐಪಿಎಲ್ನಲ್ಲಿ (IPL) ಮೆಂಟರ್ (Mentor) ಆಗಿದ್ದ ಸಮಯದಲ್ಲಿ ವಿವಾದಗಳಿಂದಲೇ ಸೌಂಡ್ ಮಾಡುತ್ತಿದ್ದ ಗೌತಿ (gautam Gambhir) ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದು, ಇದು ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ವಿಚಾರವಾಗಿ ಗೌತಮ್ ವಿರುದ್ಧ ಗಂಭೀರ ಕ್ರಮಕ್ಕೆ (Strict Action) ನೆಟ್ಟಿಗರು ಆಗ್ರಹಿಸಿದ್ದಾರೆ.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಫ್ಯಾಂಟಸಿ ಕ್ರಿಕೆಟ್ ಅಪ್ಲಿಕೇಶನ್ (Fantasy Cricket Application) ಒಂದರ ಜಾಹೀರಾತನ್ನು ತಮ್ಮ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆಶಾದಾಯಕವಾಗಿ, ಭಾರತವು (Team India) T20 ಸರಣಿಯಲ್ಲಿ (T20 Series) ಬಾಂಗ್ಲಾದೇಶದ (Bangladesh) ವಿರುದ್ಧ ತಮ್ಮ ಪ್ರಾಬಲ್ಯವನ್ನು ಮುಂದುವರೆಸುತ್ತದೆ. Real11official ಜೊತೆಗೆ ಮೂರು ಪಂದ್ಯಗಳ ಸರಣಿಯನ್ನು ಆನಂದಿಸಿ. ನಿಮ್ಮ ಅಭಿಪ್ರಾಯವನ್ನು ಹೌದು/ಇಲ್ಲದಲ್ಲಿ ಹಂಚಿಕೊಳ್ಳಿ ಮತ್ತು ತ್ವರಿತ ನಗದು ಬಹುಮಾನಗಳನ್ನು (Cash Price) ಪಡೆದುಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
Hopefully, India will continue their domination against Bangladesh in T20Is as well. Enjoy the three-match series with @Real11official. Share your opinion in a Yes/No and avail instant cash rewards.
— Gautam Gambhir (@GautamGambhir) October 12, 2024
Download Link – https://t.co/jFv1ZXcBhp
Signup Code- GAMBHIR & GET ₹100 pic.twitter.com/SFmrSCsQCt
ಇತ್ತ ಗೌತಮ್ (Gautam Gambhir) ಪೋಸ್ಟ್ ಹಾಕುತ್ತಿದ್ದಂತೆ ಕಿಡಿಕಾರಿರುವ ಕ್ರೀಡಾಭಿಮಾನಿಗಳು ಗಂಭೀರ್ ಅವರು ಈ ಹಿಂದೆ ಮಾಜಿ ಕ್ರಿಕೆಟಿಗರು ಪಾನ್ ಮಸಾಲಾ (Pan Masala) ಮತ್ತು ಬೆಟ್ಟಿಂಗ್ ಆ್ಯಪ್ಗಳ (Betting Application) ಜಾಹೀರಾತನ್ನು ನೀಡುತ್ತಿರುವಾಗಿ ಅದನ್ನು ಕಟುವಾಗಿ ಟೀಕಿಸುತ್ತಿದ್ದರು. ಆದರೆ, ಇದೀಗ ಅವರೇ ಬೆಟ್ಟಿಂಗ್ ಆ್ಯಪ್ಗೆ ಜಾಹೀರಾತು ನೀಡುತ್ತಿದ್ದಾರೆ. ಇದು ಯಾವ ರೀತಿ ಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಗೌತಮ್ ಗಂಭೀರ್ (Gautam Gambhir) ಅವರು ಫ್ಯಾಂಟಸಿ ಲೀಗ್ಗಳಿಗೆ (Fantasy League) ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅಂದಿನ ಬಿಸಿಸಿಐ (BBCI) ಮುಖ್ಯಸ್ಥರಾಗಿದ್ದ ಸೌರವ್ ಗಂಗೂಲಿ (Saurav Ganguly) ಅವರನ್ನು ಟೀಕಿಸಿದ್ದರು. ನಾನು ಮದ್ಯ, ತಂಬಾಕು ಮತ್ತು ಆನ್ಲೈನ್ ಜೂಜಿಗೆ ಪ್ರೋತ್ಸಾಹಿಸುವ ವ್ಯಕ್ತಿಗಳನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದರು. ಇದೀಗ ಗಂಭೀರ್ ಬೆಟ್ಟಿಂಗ್ ಆ್ಯಪ್ ಕುರಿತು ಪೋಸ್ಟ್ ಮಾಡಿದ್ದು, ಇದು ಡಬಲ್ ಸ್ಟಾಂಡರ್ಡ್ (Double Standard) ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಅಲ್ಲದೇ ಹಳೆಯ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಗಂಭೀರ್ರನ್ನು ಕುಟುಕಿದ್ದಾರೆ.