

ಕಲ್ಕತ್ತಾ: ಆರ್.ಜಿ. ಕಾರ್ ಮಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ (RG kar Medical College And Hospital) ನಡೆದಿದ್ದ ಟ್ರೈನಿ ವೈದ್ಯೆ (Trainee Doctor) ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ (West Bengal) ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ಮುಂದುವರೆದಿದ್ದು, ಇದೀಗ ಮಹತ್ವದ ಬೆಳವಣಿಗೆಯಲ್ಲಿ ಸರ್ಕಾರಿ ಆಸ್ಪತ್ರೆಯೆ ವೈದ್ಯರು (Doctors) ಸಾಮೂಹಿಕ ರಾಜೀನಾಮೆ (Mass Resignation) ನೀಡಿದ್ದಾರೆ.
ವೈದ್ಯರು (Doctors) ನೀಡಿರುವ ಸಾಮೂಹಿಕ ರಾಜೀನಾಮೆಗೆ (Mass Resignation) ಕೌಂಟರ್ ಕೊಟ್ಟಿರುವ ಸರ್ಕಾರ ಯಾವುದೇ ಕಾರಣಕ್ಕೂ ರಿಸಿಗ್ನೇಷನ್ಅನ್ನು ಅಂಗೀಕರಿಸಲಾಗುವುದಿಲ್ಲ. ಯಾರೇ ಆದರೂ ಸರ್ಕಾರದ ನಿಯಮದ ಪ್ರಕಾರ ವೈಯಕ್ತಿಕವಾಗಿ ರಾಜೀನಾಮೆ ನೀಡಬೇಕು ಎಂದು ಹೇಳುವ ಮೂಲಕ ಪ್ರತಿಭಟನಾನಿರತರಿಗೆ (Protestors) ಕೌಂಟರ್ ನೀಡಿದೆ.
ಈ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ, ಸೇವಾ ನಿಯಮಗಳ ಪ್ರಕಾರ ಉದ್ಯೋಗಿಯು ತನ್ನ ರಾಜೀನಾಮೆಯನ್ನು (Resignation) ವೈಯಕ್ತಿಕವಾಗಿ ಕಳುಹಿಸಬೇಕು. ಈ ರೀತಿ ಸಾಮೂಹಿಕವಾಗಿ ಸಹಿ ಹಾಕಿ ಕಳುಹಿಸಿದರೆ ಅದು ರಾಜೀನಾಮೆ ಎನ್ನಿಸಿಕೊಳ್ಳುವುದಿಲ್ಲ. ವೈದ್ಯರು ಕಳುಹಿಸಿರುವ ಪತ್ರಗಳು ನಿರ್ದಿಷ್ಟ ಸಮಸ್ಯೆಗಳನ್ನು ತಿಳಿಸಿಲ್ಲ ಎಂದು ಹೇಳಿದ್ದಾರೆ.
ಆರ್.ಜಿ. ಕಾರ್ ಮಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ (RG kar Medical College And Hospital) ನಡೆದಿದ್ದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಿ ಕೆಲವು ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿ ಅದರ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿದ್ದರು. ಇದಾದ ಬಳಿಕ ರಾಜ್ಯಾದ್ಯಂತ ಅನೇಕ ವೈದ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಸವಾಲೆಸೆದಿದ್ದರು.