‘ರಾಬರ್ಟ್’ನ ‘ದೋಸ್ತ ಕಣೋ ...’ ಮಾಸ್ ಸಾಂಗ್​ಗೆ ವಿಜಯ್ ಪ್ರಕಾಶ್, ಹೇಮಂತ್ ಕುಮಾರ್ ಧ್ವನಿ

Robert - Dosta Kano
Published on

ಬೆಂಗಳೂರು: ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ‘ಬಾ ಬಾ ಬಾ ನಾನ್ ರೆಡಿ ...’ ಮತ್ತು ‘ಜೈ ಶ್ರೀರಾಮ’ ಎಂಬ ಎರಡು ಹಾಡುಗಳು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿವೆ. ಈ ಮಧ್ಯೆ ಚಿತ್ರತಂಡ ‘ದೋಸ್ತ ಕಣೋ ...’ ಎಂಬ ಮೂರನೇ ಹಾಡನ್ನು ಶನಿವಾರ ಬೆಳಿಗ್ಗೆ ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆ ಮಾಡಿದೆ.

ಈ ಹಾಡಿನ ವಿಶೇಷವೆಂದರೆ, ಇದೇ ಮೊದಲ ಬಾರಿಗೆ ವಿಜಯ್ ಪ್ರಕಾಶ್ ಮತ್ತು ಹೇಮಂತ್ ಕುಮಾರ್ ಜತೆಯಾಗಿ ಹಾಡಿದ್ದಾರೆ. ‘ಬೈದು ಬುದ್ಧಿ ಹೇಳೋ ಫಾದರ್ ಕಣೋ ಇವ್ನು, ನೋವಲ್ ಕಣ್ಣೀರ್ ಒರೆಸೋ ಮದರು ಕಣೋ, ಜೀವನಕ್ ಪಾಠ ಹೇಳೋ ಟೀಚರ್ ಕಣೋ ಇವ್ನು, ಲೈಫು ಪಾಟರ್°ರ್​ಗಿಂತ ಕ್ಲೋಸು ಕಣೋ, ರಕ್ತ ಸಂಬಂಧನೂ ಮೀರಿದ್ ಬಂಧು ಇವ್ನು, ಜಾತಿ ಮತಕ್ಕಿಂತ ತುಂಬಾ ದೊಡ್ಡೋನ್ ಇವ್ನು, ಎಲ್ಲರ ಪ್ರೀತಿಗಿಂತ ತುಂಬ ಜಾಸ್ತಿ ಪ್ರೀತಿ ನೀಡೋನ್ ದೋಸ್ತಾ ಕಣೋ ...’ ಎಂದು ಸಾಗುವ ಈ ಹಾಡನ್ನು ‘ಬಹದ್ದೂರ್’ ಚೇತನ್ ಕುಮಾರ್ ಬರೆದಿದ್ದಾರೆ.

‘ರಾಬರ್ಟ್’ ಚಿತ್ರದ ಚಿತ್ರೀಕರಣ ಬಿಡುಗಡೆಯಾಗಿದ್ದು, ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ. ತರುಣ್ ಸುಧೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ್ ನಿರ್ವಿುಸುತ್ತಿದ್ದಾರೆ. ದರ್ಶನ್ ಜತೆಗೆ ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿಕಿಶನ್ ಮುಂತಾದವರು ನಟಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net