

Lunar Eclipse: ಇದೇ ಸೆ.7ರಂದು ಆಗಸದಲ್ಲಿ ಗೋಚರಿಸುವ ರಕ್ತ ಚಂದ್ರ ಗ್ರಹಣಕ್ಕೆ ದಿನಗಣನೆ ಆರಂಭಗೊಂಡಿದೆ. ಈ ಬಗ್ಗೆ ಜನರು ತೀವ್ರ ಕುತೂಹಲ ಹೊಂದಿದ್ದಾರೆ. ಭಾದ್ರಪದ ಪೌರ್ಣಮಿಯ ದಿನದಂದು ರಾಹುವಿನ ಕಾರಣದಿಂದಾಗಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಗ್ರಹಣ, ಕೇವಲ ಖಗೋಳಶಾಸ್ತ್ರದ ವಿಷಯವಲ್ಲ. ಇದು ಭಾರತೀಯ ಸಂಸ್ಕೃತಿ ಮತ್ತು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.
ಗ್ರಹಣಗಳ ಬಗ್ಗೆ ಜನರಿಗೆ ಹಲವು ಅನುಮಾನಗಳು, ತಪ್ಪು ಕಲ್ಪನೆಗಳು ಮತ್ತು ಸಾಕಷ್ಟು ಗೊಂದಲಗಳಿವೆ. ವಿಶೇಷವಾಗಿ ಹಿಂದೂಗಳು ಹಲವಾರು ನಂಬಿಕೆಗಳನ್ನು ಹೊಂದಿದ್ದಾರೆ. ಕೆಲವರು, ಗ್ರಹಣ ಸಮಯಗಳನ್ನು ಅಶುಭವೆಂದು ಪರಿಗಣಿಸುತ್ತಾರೆ. ಮುಖ್ಯವಾಗಿ, ಆ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಅಭಿಪ್ರಾಯಿಸುತ್ತಾರೆ. ಈ ಬಗ್ಗೆ ಜ್ಯೋತಿಷಿಗಳು ಸಹ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಷ್ಟಕ್ಕೂ ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.