ಮನೆ ಬಾಗಿಲಿಗೇ ಮಾಸಾಶನ; ಸಾರ್ವಜನಿಕ ಸೇವೆಗೆ ಭಾರೀ ಕೊಡುಗೆ ನೀಡಿದ ಬಜೆಟ್​

Budget-4
Published on

ಬೆಂಗಳೂರು: ಈ ಬಾರಿಯ ಬಜೆಟ್​ನಲ್ಲಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಯ ಕಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

* ಅಶಕ್ತರು, ವೃದ್ಧರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಸರ್ಕಾರದ ದತ್ತಾಂಶ ಆಧರಿಸಿ ಪಿಂಚಣಿ ಸೌಲಭ್ಯ ನೀಡುವ “ಮನೆ ಬಾಗಿಲಿಗೇ ಮಾಸಾಂಶ” ಅಭಿಯಾನಕ್ಕೆ ಚಾಲನೆ.

* ಕೃಷಿ ಭೂಮಿಯನ್ನು ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ಕ್ರಮ.

* ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಎಲ್ಲ ವ್ಯವಹಾರಗಳ ಗಣಕೀಕರಣಕ್ಕೆ ಕ್ರಮ.

* ತ್ವರಿತವಾಗಿ ನಿಖರ ಭೂ-ದಾಖಲೆಗಳನ್ನು ಒದಗಿಸಲು ಗಣಕೀಕೃತ ಆಕಾರಬಂದ್ ಮಾಹಿತಿ ಮತ್ತು ಪಹಣಿ ಮಾಹಿತಿಯನ್ನು ಸಂಯೋಜಿಸಲು ಕ್ರಮ.

* 25 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ಜನ ವಸತಿ ಪ್ರದೇಶಗಳಿಗೆ ಹಕ್ಕು ದಾಖಲೆಗಳನ್ನು ವಿತರಿಸುವ “ಸ್ವಾಮಿತ್ವ” ಯೋಜನೆ ಅನುಷ್ಠಾನ.

* ನಗರ ಮಾಪನ ಜಾರಿಯಲ್ಲಿರುವ 48 ನಗರ ಮತ್ತು ಪಟ್ಟಣಗಳ ಎಲ್ಲಾ ನಗರಮಾಪನ ದಾಖಲೆಗಳ ಸಂರಕ್ಷಣೆಗೆ ಕ್ರಮ.

* ಮೂಲ ಗೇಣಿದಾರರು, ಕುಮ್ಕಿ ಜಮೀನು , ಖಾನೇ, ಬಾನೇ, ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ.

* HRMS-2 ಯೋಜನೆ ಅಡಿಯಲ್ಲಿ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸೇವೆಗಳನ್ನು ಆನ್‍ಲೈನ್ ಮೂಲಕ ಜಾರಿಗೊಳಿಸಲು ಕ್ರಮ

* ಕೌಟುಂಬಿಕ ಗುರುತು ಸೃಜನೆ ಹಾಗೂ ಸ್ವಯಂ ಪ್ರೇರಣೆಯಿಂದ ನಾಗರಿಕರಿಗೆ ಸೇವೆ/ ಸೌಲಭ್ಯಗಳನ್ನು ಒದಗಿಸಲು ಸಾಮಾಜಿಕ ನೋಂದಣಿ ಪುಸ್ತಕ ಮತ್ತು ಅರ್ಹತಾ ನಿರ್ವಹಣಾ ವ್ಯವಸ್ಥೆ ಜಾರಿಗೆ 15 ಕೋಟಿ ರೂ. ಅನುದಾನ.

* ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲಾ ಯೋಜನೆಗಳಿಗೂ ನೇರ ಫಲಾನುಭವಿ ವರ್ಗಾವಣೆ (ಡಿಬಿಟಿ) ವೇದಿಕೆಯಡಿ ಪಾವತಿ ವ್ಯವಸ್ಥೆ ವಿಸ್ತರಣೆ.

* ಆಸ್ತಿ ನೋಂದಣಿಯಲ್ಲಿ ವಂಚನೆ ಹಾಗೂ ದಾಖಲೆ ತಿರುಚುವುದನ್ನು ತಡೆಗಟ್ಟಲು ಬ್ಲಾಕ್‍ಚೈನ್ ತಂತ್ರಜ್ಞನ ಬಳಸಿ ಆಸ್ತಿ ನೋಂದಣಿ ಮಾಡುವ ಪ್ರಾಯೋಗಿಕ ಯೋಜನೆ.

* ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಮೂಲಕ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ ಜಾರಿ.

* ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಸುರಕ್ಷತೆ ಬಲಪಡಿಸಲು ಎರಡು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪನೆ.

* 35 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ದತ್ತಾಂಶ ಕೇಂದ್ರ ವಿಪತ್ತು ಚೇತರಿಕೆ ಮತ್ತು ವ್ಯವಹಾರ ಮುಂದುವರಿಕೆ ತಾಣಕ್ಕೆ ಚಾಲನೆ.

* ಮೂರು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಶೈಕ್ಷಣಿಕ ದಾಖಲೆಗಳು, ಪ್ರಶಸ್ತಿಗಳ ಮಾಹಿತಿಗಳನ್ನೊಳಗೊಂಡ ರಾಷ್ಟ್ರೀಯ ಶೈಕ್ಷಣಿಕ ಡೆಪಾಸಿಟರಿ ಅನುಷ್ಠಾನ.

* ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯನ್ನು ಸುಲಭಣಸಾಧ್ಯಗೊಳಿಸಲು ಎರಡು ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್ ಅಭಿವೃದ್ಧಿ.

* ಸರ್ಕಾರದ ವಿವಿಧ ಇಲಾಖೆಗಳ ಜಾಹೀರಾತು ಮತ್ತು ಪ್ರಕಟಣೆಗಳನ್ನು ಸಂಯೋಜಿಸಿ ಸೃಜನಶೀಲಗೊಳಿಸಲು ಬ್ರ್ಯಾಂಡ್ ಪ್ರೊಮೋಷನ್ ಕೌನ್ಸಿಲ್ ರಚನೆ.

* ಚಿತ್ರೀಕರಣ ಅನುಮತಿ ನೀಡುವ ಪ್ರಕ್ರಿಯೆ ಸರಳೀಕರಣ; ಸೇವಾ ಸಿಂಧು ಪೋರ್ಟಲ್ ಮೂಲಕ ಅನುಮತಿ.

* ಮುಂದಿನ ಐದು ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 100 ಪೋಲಿಸ್ ಠಾಣೆ ನಿರ್ಮಾಣದ ಗುರಿ. 2021-22ರಲ್ಲಿ 25 ಕೋಟಿ ರೂ. ಅನುದಾನ.

* 2740 ಕೋಟಿ ರೂ.ಗಳ ಮೊತ್ತದಲ್ಲಿ ಪೋಲಿಸ್ ಗೃಹ 2025 ಯೋಜನೆಗೆ ಚಾಲನೆ; 10,032 ವಸತಿಗೃಹ ನಿರ್ಮಾಣದ ಗುರಿ.

* ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲ್ಲೂಕಿನಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪಡೆಯ 10ನೇ ಬೆಟಾಲಿಯನ್​ ಬಲಪಡಿಸಲು ಎಂಟು ಕೋಟಿ ರೂ. ಅನುದಾನ.

* ಕೊಡಗು ಮತ್ತು ಹಾವೇರಿ ಜಿಲ್ಲೆಯಲ್ಲಿ ನೂತನ ಜಿಲ್ಲಾ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ ಎಂಟು ಕೋಟಿ ರೂ . ಹಂಚಿಕೆ.

* ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಪರಿಷ್ಕೃತ ಕೆ-ಸೇಫ್ ಯೋಜನೆ ಮುಂದಿನ 5 ವರ್ಷಗಳಲ್ಲಿ ಜಾರಿ.

* ಆಧುನಿಕ ತಂತ್ರಜ್ಞನದೊಂದಿಗೆ ಕರಾವಳಿ ಕಾವಲು ಪಡೆಯನ್ನು ಹಂತ ಹಂತವಾಗಿ ಬಲಪಡಿಸಲು ಕ್ರಮ; ಪ್ರಸಕ್ತ ಸಾಲಿನಲ್ಲಿ ಎರಡು ಕೋಟಿ ರೂ. ಅನುದಾನ

* 40 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯದ ಎಂಟು ಕಾರಾಗೃಹಗಳ ಸಾಮಥ್ರ್ಯ ಹೆಚ್ಚಳ; 2021-22ರಲ್ಲಿ 10 ಕೋಟಿ ರೂ. ಅನುದಾನ.

* ಖೈದಿಗಳನ್ನು ಕಾರಾಗೃಹದಿಂದಲೇ ಆನ್‍ಲೈನ್ ಮೂಲಕ ನ್ಯಾಯಾಲಯ ಕಲಾಪಕ್ಕೆ ಹಾಜರುಪಡಿಸಲು 15 ಕೋಟಿ ರೂ. ವೆಚ್ಚದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ.

* Contactlesff, Faceless and Cashless ವ್ಯವಸ್ಥೆಯ ಮೂಲಕ ಸಾರಿಗೆ ಇಲಾಖೆಯ ಮೂರು ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಕ್ರಮ.

* ಸಾರಥಿ ತಂತ್ರಾಂಶ ಸೇವೆಗಳನ್ನು ಸಾರ್ವಜನಿಕರಿಗೆ ಅನುವಾಗುವಂತೆ ಒದಗಿಸಲು “Faxilitation Centre” ಸ್ಥಾಪನೆ.

* ಸಾರಿಗೆ ಇಲಾಖೆಯ 66 P ಕಛೇರಿಗಳನ್ನು ಕಾಗದರಹಿತ ಕಛೇರಿಯಾಗಿ ರೂಪಿಸಲು ಹಳೆಯ ದಾಖಲಾತಿಗಳ ಡಿಜಿಟಲೀಕರಣ

* ರಾಜ್ಯದಲ್ಲಿ 52 ಹೊಸ ಬಸ್ ನಿಲ್ದಾಣಗಳು ಹಾಗೂ 16 ಬಸ್ ಘಟಕಗಳ ನಿರ್ಮಾಣ.

* ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 2021-22ನೇ ಸಾಲಿನಲ್ಲಿ ಒಟ್ಟಾರೆಯಾಗಿ 52,519 ಕೋಟಿ ರೂ. ಅನುದಾನ ಒದಗಿಸಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net