More

    ಶೌಚಾಲಯದಲ್ಲಿ ಮೊಬೈಲ್ ಬಳಸುವ ಅಭ್ಯಾಸವಿದೆಯೇ? ಹಾಗಿದ್ರೆ ಹುಷಾರಾಗಿರಿ…

    ಬೆಂಗಳೂರು: ನೀವು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರಲಿ ಅಥವಾ ಯಾವುದೇ ಕೆಲಸ ಮಾಡುತ್ತಿರಲಿ, ನಿಮ್ಮ ಫೋನ್ ನಿಮ್ಮೊಂದಿಗೆ ಇರಬೇಕು. ಕೈಯಲ್ಲಿ ಫೋನ್ ಇಲ್ಲದೇ ಹೋದರೆ ಏನೋ ಕಳೆದುಕೊಂಡಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ಅವರು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳುವ ವಸ್ತುಗಳಲ್ಲಿ ಮೊಬೈಲ್​ ಕೂಡಾ ಒಂದಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಶೌಚಾಲಯಕ್ಕೆ ಹೋದರೂ ಫೋನ್ ತೆಗೆದುಕೊಂಡು ಹೋಗುತ್ತಾರೆ. ಈ ಅಭ್ಯಸ ನಿಮಗೆ ಇದ್ದರೆ ಇಂದೆ ಬಿಟ್ಟು ಬಿಡಿ. ಯಾಕೆ ಇದು ಕೆಟ್ಟ ಅಭ್ಯಾಸ ಎಂದು ತಜ್ಞರು ಹೇಳುತ್ತಾರೆ ಎನ್ನುವ ನಿಮ್ಮ ಪ್ರಶ್ನೆಗೆ ನಾವು ಇಂದು ಉತ್ತರ ಕೊಡುತ್ತೇವೆ.

    ವೈದ್ಯಕೀಯ ವರದಿಗಳ ಪ್ರಕಾರ, ಫೋನ್ ಅನ್ನು ದೀರ್ಘಕಾಲದವರೆಗೆ ಜೇಬಿನಲ್ಲಿ ಇಟ್ಟುಕೊಂಡು ವೈರ್‌ಲೆಸ್ ನೆಟ್‌ವರ್ಕ್‌ಗೆ ಸಂಪರ್ಕಿಸಿದರೆ, ದೇಹವು 10 ಪಟ್ಟು ಹೆಚ್ಚು ವಿಕಿರಣಕ್ಕೆ ಒಡ್ಡಿಕೊಳ್ಳುತ್ತದೆ. ವಿಕಿರಣವು ಕ್ಯಾನ್ಸರ್​ಗೆ ಕಾರಣವಾಗಬಹುದು ಈ ವಿಕಿರಣವು ನಿಮ್ಮ ಡಿಎನ್‌ಎ ರಚನೆಯನ್ನು ಬದಲಾಯಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

    ಮೊಬೈಲನ್ನು ಕೈಯಲ್ಲಿ ಅಥವಾ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವುದರಿಂದ ಇದು ದುರ್ಬಲತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

    ಟಾಯ್ಲೆಟ್​ಗೆ ಫೋನ್​​ ತೆಗೆದುಕೊಂಡು ಹೋಗಿ ನಂತರ ಶೌಚಾಲಯದಿಂದ ಬಂದ ನಂತರ ಫೋನ್​​ಗೆ ಅಪಾಯಕಾರಿ ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುತ್ತೇವೆ. ನಿಮ್ಮ ಹಾಸಿಗೆ ಮತ್ತು ಅಡುಗೆಮನೆಗೆ ಬರುತ್ತವೆ. ಇದರಿಂದಾಗಿ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

    ಶೌಚಾಲಯಗಳಿಗೆ ಫೋನ್​ ತೆಗೆದುಕೊಂಡು ಹೋಗುವುದರಿಂದ ಅಪಾಯಕಾರಿ ಸೂಕ್ಷ್ಮಜೀವಿಗಳು ಅಂಟಿಕೊಂಡು ಮೂತ್ರದ ಸೋಂಕು ಬರುವ ಸಾಧ್ಯತೆಯೂ ಇದೆ.

    ಶೌಚಾಲಯದಲ್ಲಿ ಮೊಬೈಲ್​​ ಬಳಕೆ ಮಾಡುವುದರಿಂದ ಅನಗತ್ಯ ಮಾನಸಿಕ ಒತ್ತಡ ಹಾಗೂ ನಿಮ್ಮ ಏಕಾಗ್ರತೆ ಮತ್ತು ವಿಷಯವನ್ನು ಅರಿಯಲು ಗಮನ ಕೇಂದ್ರೀಕರಿಸುವ ಕ್ಷಮತೆಗಳ ಮೇಲೆ ಪ್ರಭಾವ ಬೀರಬಹುದು.

    ಶೌಚಾಲಯಕ್ಕೆ ತಮ್ಮ ಮೊಬೈಲು ಫೋನುಗಳನ್ನು ಜೊತೆಗೆ ಕೊಂಡು ಹೋದ ವ್ಯಕ್ತಿಗಳು ಸಾಮಾನ್ಯಕ್ಕೂ ಹೆಚ್ಚು ಸಮಯ ಶೌಚಾಲಯದಲ್ಲಿಯೇ ಕಳೆಯುತ್ತಾರೆ. ಅಂದರೆ ಮಲವಿಸರ್ಜನೆಗೆ ಸಹಜವಾಗಿ ಬೇಕಾಗುವ ಸಮಯಕ್ಕಿಂತಲೂ ಹೆಚ್ಚು ಸಮಯ ನೀಡುತ್ತಾರೆ.   ನಿಧಾನಗೊಂಡಷ್ಟೂ ಮಲಬದ್ದತೆಯಾಗುವ ಸಾಧ್ಯತೆ ಹೆಚ್ಚುತ್ತದೆ.

    ತೂಕ ಇಳಿಸಿಕೊಳ್ಳಲು ಬಯಸಿದರೆ ಈ 5 ಹಣ್ಣುಗಳನ್ನು ತಿನ್ನಬೇಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts