ಸಾವಿನ ವಿಚಾರದಲ್ಲಿ ಆಟ ಆಡಬೇಡಿ!.. ಕಿಡಿಗೇಡಿಗಳಿಗೆ ತೇಜಸ್ವಿನಿ ಖಡಕ್​ ಎಚ್ಚರಿಕೆ

theju
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ತೇಜಸ್ವಿನಿ ಪ್ರಕಾಶ್ ಇನ್ನಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ, ಮುನ್ನೆಲೆಗೆ ಬಂದ ತೇಜಸ್ವಿನಿ, ಆ ರೀತಿಯಲ್ಲಿ ಸುದ್ದಿ ಸೃಷ್ಟಿಸಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಗರಂ ಆಗಿದ್ದಾರೆ.

ಈ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ಆ ಸುದ್ದಿಯಿಂದಾದ ನೋವನ್ನು ಹಂಚಿಕೊಂಡಿದ್ದಾರೆ. ‘ಸಿನಿಮಾ, ಸೀರಿಯಲ್ ಬಗ್ಗೆ ಗಾಸಿಪ್ ಸೃಷ್ಟಿಸಿದರೆ ಅದನ್ನು ಅರಗಿಸಿಕೊಳ್ಳಬಹುದು. ಆದರೆ, ಸಾವಿನ ವಿಚಾರದಲ್ಲಿ ಈ ರೀತಿ ಸುಳ್ಳು ಸುದ್ದಿ ಬಿತ್ತರಿಸುವುದು ನಿಜಕ್ಕೂ ದುರಂತ. ಈಗಾಗಲೇ ಅಪ್ಪನನ್ನು ಕಳೆದುಕೊಂಡ ನಮ್ಮ ಇಡೀ ಕುಟುಂಬ ಅದರಿಂದ ಆಚೆ ಬಂದಿಲ್ಲ. ಹೀಗಿರುವಾಗಲೇ ಕಳೆದೊಂದು ತಿಂಗಳಿಂದ ಅಪ್ಪನ ಸಾವಿನ ಬೆನ್ನಲ್ಲೇ ಮಗಳೂ ಆತ್ಮಹತ್ಯೆ ಮಾಡಿಕೊಂಡಳು ಎಂಬ ಸುದ್ದಿ ಹಾಕುತ್ತಿದ್ದಾರೆ. ಆ ರೀತಿ ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದುಕೊಂಡಿದ್ದೇನೆ’ ಎನ್ನುತ್ತಾರೆ ತೇಜಸ್ವಿನಿ.

ಮೊದಮೊದಲು ಅಷ್ಟಾಗಿ ಈ ವಿಚಾರದ ಬಗ್ಗೆ ತಲೆಕಡಿಸಿಕೊಳ್ಳದ ತೇಜಸ್ವಿನಿಗೆ, ದಿನಕಳೆದಂತೆ ಫೋನ್ ಕರೆಗಳು ಹೆಚ್ಚಾದವಂತೆ. ಇದೆಲ್ಲದ್ದರಿಂದ ರೋಸಿ ಹೋದ ತೇಜಸ್ವಿನಿ, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಬರೆದುಕೊಂಡು ಕಿಡಿಗೇಡಿಗಳ ವಿರುದ್ಧ ಚಾಟಿ ಬೀಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net