

Zodiac Signs : ಹಿಂದೆ ಒಂದು ಕಾಲವಿತ್ತು ಆಗ ಹೆಣ್ಣು ಮಕ್ಕಳನ್ನು ದುರ್ಬಲರಂತೆ ನೋಡುತ್ತಿದ್ದರು. ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುತ್ತಿದ್ದರು. ಒಂಟಿಯಾಗಿ ಓಡಾಡಲು ಹೆಣ್ಣು ಮಕ್ಕಳು ಹೆದರುತ್ತಿದ್ದರು. ಅಲ್ಲದೆ, ಹಿರಿಯರ ಮುಂದೆ ನಿಂತುಕೊಳ್ಳುವಂತೆಯೇ ಇರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಪುರುಷರಷ್ಟೇ ಮಹಿಳೆ ಕೂಡ ಸಶಕ್ತಳು ಅನ್ನೋದನ್ನು ನಿರೂಪಿಸಿದ್ದಾರೆ. ಅಡುಗೆ ಮನೆಗೂ ಸೈ ಆಗಸದಲ್ಲಿ ವಿಮಾನ ಓಡಿಸಲು ಸೈ ಎನ್ನುತ್ತಿದ್ದಾರೆ. ಅಷ್ಟೇ ಏಕೆ ದೇಶಕ್ಕೆ ಅಪಾಯ ಬಂದಾಗ ಬಂದೂಕು ಹಿಡಿದು ರಕ್ಷಣೆ ಸಿದ್ಧ ಎಂಬ ಸಂದೇಶ ಸಾರುತ್ತಿದ್ದಾರೆ. ಒಲಿದರೆ ನಾರಿ ಮುನಿದರೆ ಮಾರಿ ಎಂಬ ಸಂದೇಶವನ್ನು ಇಂದಿನ ಕಾಲದ ಮಹಿಳೆಯರು ಸಾರುತ್ತಿದ್ದಾರೆ. ಅಷ್ಟರ ಮಟ್ಟಿಗೆ ಇಂದಿನ ಮಹಿಳೆಯರು ಬಲಿಷ್ಠರಾಗಿದ್ದಾರೆ.
ನಿಮಗೆಲ್ಲರಿಗೂ ತಿಳಿದಿದೆ. ಅದೇನೆಂದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ರಾಶಿ ಮತ್ತು ಹುಟ್ಟಿದ ನಕ್ಷತ್ರ ಆತನ ಭವಿಷ್ಯದ ಜೀವನ, ಪ್ರೀತಿ, ಮದುವೆ, ಆರ್ಥಿಕ ಸ್ಥಿತಿ, ಉದ್ಯೋಗ, ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ಹೇಳಲಾಗಿದೆ. ಅದೇ ಕಾರಣಕ್ಕೆ ನಮ್ಮ ಹಿಂದು ಧರ್ಮದಲ್ಲಿ ಹುಟ್ಟಿನಿಂದ ಸಾಯುವರೆಗೂ ಪ್ರತಿಯೊಂದು ಕಾರ್ಯಕ್ಕೂ ಜ್ಯೋತಿಷಿಗಳ ಮೊರೆ ಹೋಗುತ್ತಾರೆ.
ಜ್ಯೋತಿಷ್ಯ ಹೇಳಿದಂತೆಯೇ ಕೆಲವು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಮಹಿಳೆಯರು ಸ್ವಭಾವತಃ ಅಪಾಯಕಾರಿಗಳಂತೆ. ಒಲಿದರೆ ನಾರಿ ಮುನಿದರೆ ಮಾರಿ ಎಂಬ ಗಾದೆ ಮಾತು ಈ ರಾಶಿಯ ಮಹಿಳೆಯರಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆಯಂತೆ. ಹಾಗಾದರೆ, ಆ ರಾಶಿಗಳು ಯಾವುವು? ಮತ್ತು ಅಪಾಯಕಾರಿ ಎನ್ನಲು ಕಾರಣಗಳೇನು? ಎಂಬ ಪ್ರಶ್ನೆಗೆ ನಾವೀಗ ಉತ್ತರ ಕಂಡುಕೊಳ್ಳೋಣ.
ಕರ್ಕಾಟಕ ರಾಶಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಭಾವನಾತ್ಮಕರಾಗಿರುತ್ತಾರೆ ಮತ್ತು ತಮ್ಮ ಪ್ರೀತಿಪಾತ್ರರಿಗೆ ಬೆದರಿಕೆ ಅಥವಾ ತೊಂದರೆ ಎದುರಾಗ ತಮ್ಮ ಉಗ್ರ ರೂಪವನ್ನು ತೋರಿಸುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ತಮ್ಮ ಕುಟುಂಬ ಮತ್ತು ಜೀವನ ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಯಾರಾದರನ್ನು ತಮ್ಮ ಶತ್ರುವೆಂದು ಪರಿಗಣಿಸಿದರೆ, ಅವರಿಗೆ ಜೀವನಪರ್ಯಂತ ನರಕ ತೋರಿಸುವಷ್ಟು ಅಪಾಯಕಾರಿಯಾಗಿರುತ್ತಾರಂತೆ. ಅವರು ತಮ್ಮ ಸ್ನೇಹಿತರಿಗೆ ಉತ್ತಮ ಸ್ನೇಹಿತರಾಗುತ್ತಾರೆ ಮತ್ತು ಅವರ ಶತ್ರುಗಳಿಗೆ ಅತ್ಯಂತ ಅಪಾಯಕಾರಿ ಶತ್ರುಗಳಾಗುತ್ತಾರಂತೆ.
ಕನ್ಯಾರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ತಾವು ಮಾಡುವ ಎಲ್ಲದರಲ್ಲೂ ಪರಿಪೂರ್ಣತೆ ಮತ್ತು ಅಚ್ಚುಕಟ್ಟಾಗಿರಲು ಬಯಸುತ್ತಾರೆ. ಇತರರು ತಮ್ಮ ಆಲೋಚನೆಗಳ ಪ್ರಕಾರ ವರ್ತಿಸದಿದ್ದರೆ, ಅವರು ತುಂಬಾ ಅಪಾಯಕಾರಿಯಾಗುತ್ತಾರೆ. ಅವರು ವಿಷಯಗಳನ್ನು ಹಾಗೆಯೇ ಸ್ವೀಕರಿಸುವುದಿಲ್ಲ ಮತ್ತು ಸಣ್ಣ ನ್ಯೂನತೆಗಳನ್ನು ಸಹ ಒಪ್ಪುವುದಿಲ್ಲ. ಈ ಗುಣಗಳೇ ಅವರನ್ನು ಅಪಾಯಕಾರಿಯನ್ನಾಗಿ ಮಾಡುತ್ತವೆ.
ಸಿಂಹ ರಾಶಿಯಲ್ಲಿ ಜನಿಸಿದ ಮಹಿಳೆಯರು ಸ್ವಾಭಾವಿಕವಾಗಿ ನಾಯಕಿಯರಾಗಿರುತ್ತಾರೆ. ಏಕೆಂದರೆ, ಅವರನ್ನು ಸೂರ್ಯನು ಆಳುತ್ತಾನೆ. ಆದ್ದರಿಂದ, ಅವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಹಠಮಾರಿತನವು ಅವರಲ್ಲಿ ತುಂಬಾ ಕೋಪ ತರಿಸಬಹುದು. ಇದೇ ಗುಣದಿಂದಾಗಿ, ಅವರು ಅನೇಕ ಸಂದರ್ಭಗಳಲ್ಲಿ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅತಿಯಾದ ಕೋಪವನ್ನು ವ್ಯಕ್ತಪಡಿಸುತ್ತಾರೆ. ಅವರ ಅನಿಯಂತ್ರಿತ ಸ್ಥಿತಿಯು ಇತರರನ್ನು ಬೆದರಿಸಬಹುದು. ಅವರಿಗೆ ತಾಳ್ಮೆ ಮತ್ತು ಎಲ್ಲರ ಅಭಿಪ್ರಾಯಗಳನ್ನು ಕೇಳುವ ಸಾಮರ್ಥ್ಯದ ಕೊರತೆಯಿದೆ. ಇದು ಅವರನ್ನು ಇತರರ ದೃಷ್ಟಿಯಲ್ಲಿ ಅಪಾಯಕಾರಿಯಾಗಿ ಕಾಣುವಂತೆ ಮಾಡುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.