ಕಾಶ್ಮೀರ್ ಫೈಲ್ಸ್​ನಂತಹ ಚಿತ್ರಗಳನ್ನು ಮಾಡಲ್ಲ; ಜಾನ್ ಅಬ್ರಾಹಂ ಅಭಿಪ್ರಾಯಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು? | Vivek Agnihotri

Vivek-john
Published on

Vivek Agnihotri: ಕಾಶ್ಮೀರ್ ಫೈಲ್ಸ್​ನಂತಹ ಚಿತ್ರಗಳನ್ನು ಅತಿಯಾದ ರಾಜಕೀಯ ಓಲೈಕೆಗೆ ಮಾಡಬಾರದು, ಅಂತಹ ಚಿತ್ರಗಳಲ್ಲಿ ನಾನು ನಟಿಸಲ್ಲ ಎಂದಿದ್ದ ಬಾಲಿವುಡ್ ನಟ ಜಾನ್​ ಅಬ್ರಾಹಂ ಹೇಳಿಕೆಗೆ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ದಿ ಬೆಂಗಾಲ್ ಫೈಲ್ಸ್ ಚಿತ್ರ ವಿವಾದದ ಕುರಿತು ಎನ್​ಡಿಟಿವಿ ಸಂಪಾದಕಿ ಜೊತೆ ಜೊತೆ ನಡೆಸಿದ ಸಂದರ್ಶನದಲ್ಲಿ ಅಗ್ನಿಹೋತ್ರಿ, ಜಾನ್​ ಅಬ್ರಾಹಂ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜಾನ್ ಇತಿಹಾಸಕಾರ, ಬುದ್ಧಿಜೀವಿ, ಚಿಂತಕ ಅಥವಾ ಬರಹಗಾರನಲ್ಲ. ಅವರು ಸತ್ಯಮೇವ ಜಯತೇ ನಂತಹ ಅತ್ಯಂತ ರಾಷ್ಟ್ರಭಕ್ತಿಯ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಡಿಪ್ಲೊಮ್ಯಾಟ್ ಮತ್ತು ಆ ರೀತಿಯ ಎಲ್ಲಾ ರೀತಿಯ ಚಲನಚಿತ್ರಗಳನ್ನು ಮಾಡಿದ್ದಾರೆ. ಹಾಗೆ ವಿವಿಧ ಕಾರಣಗಳಿಗಾಗಿ ಅವರು ಹೇಳಿರಬೇಕು.

ಯಾವುದೋ ಮಹಾನ್ ಇತಿಹಾಸಕಾರರು ಇದನ್ನು ಹೇಳಿದ್ದಾರೆಂದು ನೀವು ನನಗೆ ಹೇಳಿದ್ದರೆ ಅರ್ಥವಾಗುತ್ತಿತ್ತು. ಅವರು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಭಾರತದ ವಾತಾವರಣ ಯಾವಾಗ ಅತಿ ರಾಜಕೀಯವಾಗಿರಲಿಲ್ಲ? ಭಾರತದಲ್ಲಿ ಹಿಂದೂ-ಮುಸ್ಲಿಂ ಮತ್ತು ಜಾತಿ ಸಮಸ್ಯೆಗಳು ಯಾವಾಗ ಇರಲಿಲ್ಲ? ಹೇಳಿ ಎಂದಿದ್ದಾರೆ.

ಜಾನ್​ಗೆ ಮೋಟಾರ್‌ಬೈಕ್‌ಗಳನ್ನು ಓಡಿಸುವುದಕ್ಕೆ, ದೇಹವನ್ನು ಪ್ರದರ್ಶಿಸುವುದಕ್ಕೆ ಮತ್ತು ಪ್ರೋಟೀನ್ ತಿನ್ನುವುದಕ್ಕೆ ಹೆಸರುವಾಸಿಯಾಗಿದ್ದಾರೆ, ಅವರು ಆ ವಿಷಯಗಳ ಮೇಲೆ ಗಮನಹರಿಸಬೇಕು. ಅವರು ಸಿನಿಮಾ ಬಗ್ಗೆ ಮಾತನಾಡದಿರುವುದು ಉತ್ತಮ  ಎಂದು ತಿರುಗೇಟು ನೀಡಿದ್ದಾರೆ.

ಚಲನಚಿತ್ರ ನಿರ್ಮಾಪಕರು ಹಿಂದೂ-ಮುಸ್ಲಿಂ ಗಲಭೆಗಳು ಅಥವಾ ಜಾತಿ ವಿಭಜನೆಯಂತಹ ವಿಷಯಗಳನ್ನು ನಿಷಿದ್ಧ ವಿಷಯಗಳಾಗಿ ಏಕೆ ಪರಿಗಣಿಸಬೇಕು. ಹಿಂದೂಗಳು ಮುಸ್ಲಿಮರನ್ನು ಇಷ್ಟಪಡಬಾರದು ಎಂದು ನಾನು ಹೇಳುತ್ತಿಲ್ಲ. ನನ್ನ ಚಿತ್ರ ಭಾರತದ ಜನರ ಧ್ವನಿಯಾಗಿದೆ. ರಾಜಕೀಯ ಶಕ್ತಿಗಳು ಕೋಮು ರಾಜಕೀಯ ಮತ್ತು ಕೋಮು ಹಿಂಸಾಚಾರವನ್ನು ಬಳಸಿದಾಗ ಸಾಮಾನ್ಯ ಮನುಷ್ಯ ಹೇಗೆ ಬಳಲುತ್ತಾನೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.

ಬೆಂಗಾಲ್ ಫೈಲ್ಸ್ ಸೆಪ್ಟೆಂಬರ್ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಮಿಥುನ್ ಚಕ್ರವರ್ತಿ, ಶಾಶ್ವತ ಚಟರ್ಜಿ, ಅನುಪಮ್ ಖೇರ್, ಪಲ್ಲವಿ ಜೋಶಿ, ಪ್ರಿಯಾಂಶು ಚಟರ್ಜಿ ಮತ್ತು ದರ್ಶನ್ ಕುಮಾರ್ ನಟಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net